ಸೆಮಿಫೈನಲ್ ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ..

359

ಮೆಲ್ಬೋರ್ನ್: ಮಹಿಳೆಯರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತನ್ನ ಗೆಲುವಿನ ಓಟ ಮುಂದುವರೆಸಿದೆ. ಇಂದು ನಡೆದ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್ ಗೆ ಎಂಟ್ರಿ ಪಡೆದಿದೆ.

ಇಲ್ಲಿನ ಜಂಕ್ಷನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಡಿಯನ್ ಟೀಂ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತ್ತು. ಶಫಾಲಿ ಶರ್ಮಾ ಅಬ್ಬರದ ಬ್ಯಾಟಿಂಗ್ ಮುಂದುವರೆದಿದ್ದು ಇಂದು ಸಹ 46 ರನ್ ಬಾರಿಸಿದ್ರು. ತಾನಿಯಾ ಭಾಟಿಯಾ 23 ರನ್ ಬಾರಿಸಿದ್ರು.

ನ್ಯೂಜಿಲೆಂಡ್ ಪರ ರೋಸ್ ಮೇರ್ ಹಾಗೂ ಕೆರ್ರ್ ತಲಾ 2 ವಿಕೆಟ್ ಪಡೆದ್ರು. ಲೀ ತುಹುಹು, ಕಾಸ್ಪರೆಕ್, ಸೋಫಿ ಡಿವೈನ್ ತಲಾ 1 ವಿಕೆಟ್ ಪಡೆದ್ರು.

133 ರನ್ ಗಳ ಸಾಧಾರಣ ಗುರಿ ಚೇಸ್ ಮಾಡಿದ ನ್ಯೂಜಿಲೆಂಡ್ ಟೀಂ, ಭಾರತದ ಪಕ್ಕಾ ಬೌಲಿಂಗ್ ನಿಂದಾಗಿ 6 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿ 3 ರನ್ ಗಳಿಂದ ರೋಚಕ ಸೋಲು ಅನುಭವಿಸಿತು. ಈ ಮೂಲಕ ಟಿ-20 ವಿಶ್ವಕಪ್ ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಂಡವಾಗಿ ಭಾರತೀಯ ಮಹಿಳಾ ಟೀಂ ಹೊರಹೊಮ್ಮಿದೆ. ಶಫಾಲಿ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ್ಳು.




Leave a Reply

Your email address will not be published. Required fields are marked *

error: Content is protected !!