ದೆಹಲಿ ಹಿಂಸಾಚಾರ: ಏರುತ್ತಲೇ ಇದೆ ಸಾವಿನ ಸಂಖ್ಯೆ… ಪ್ರಜಾಸ್ತ್ರದಲ್ಲಿ ದಂಗೆ ನಂತರದ ಫೋಟೋಸ್…

846

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರದಿಂದ ನಡೆದ ಹಿಂಸಾಚಾರದಲ್ಲಿ ಸಾವಿನ ಸಂಖೆ ಏರುತ್ತಲೇ ಇದೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಬರೋಬ್ಬರಿ 34 ಮಂದಿ ಸಾವನ್ನಪ್ಪಿದ್ದಾರೆ ಅನ್ನೋದು ತಿಳಿದು ಬಂದಿದೆ. ಅಲ್ದೇ, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಸೀಲಾಂಪುರ, ಚಾಂದ್ ಬಾಗ್, ಭಜನ್ ಪುರ್, ಖಜೂರಿಖಾಸ್ ಪ್ರದೇಶಗಳಲ್ಲಿ ತೀವ್ರ ಹಿಂಸಾಚಾರ ನಡೆದಿತ್ತು. ಹೀಗಾಗಿ ಈ ಭಾಗಗಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಬಗ್ಗೆ ಮಾತ್ನಾಡಿರುವ ಡಿಸಿಪಿ ಎಸ್ಎನ್ ಶ್ರೀವಾತ್ಸವ, ಪರಿಸ್ಥಿತಿ ಶಾಂತವಾಗಿದೆ. ನಿನ್ನೆ ರಾತ್ರಿಯಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮೈಕ್ ಮೂಲಕ ಪೊಲೀಸ್ರು ಜನರಿಗೆ ಧೈರ್ಯ ತುಂಬುತ್ತಿದ್ರೂ ಯಾರೊಬ್ಬರು ಮನೆಯಿಂದ ಹೊರ ಬರದಂತಾಗಿದೆ. ಹೀಗಾಗಿ ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿದ್ದು, ಮನೆಯಿಂದ ಹೊರ ಬರಲು ಜನ ಹೆದರುತ್ತಿದ್ದಾರೆ. ಇದ್ರಿಂದಾಗಿ ಜನರು ದಿನಬಳಕೆ ವಸ್ತುಗಳಿಗೆ ಪರದಾಡುವಂತಾಗಿದೆ.




Leave a Reply

Your email address will not be published. Required fields are marked *

error: Content is protected !!