ಸಿಂದಗಿಯಲ್ಲಿ ಮುರಿದ ಆಸನಗಳನ್ನು ಇಟ್ಟಿದ್ಯಾರು?

490

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ವಿವೇಕಾನಂದ ಸರ್ಕಲ್ ರಸ್ತೆ ಹಾಗೂ ವಿಜಯಪುರ ರಸ್ತೆಯ ಪುಟ್ ಪಾತ್ ಮೇಲೆ ಸಾರ್ವಜನಿಕರು ಕುಳಿತುಕೊಳ್ಳಲು ಆಸನಗಳನ್ನು ಸ್ಥಾಪಿಸಲಾಗಿದೆ. ಬಣ್ಣ ಬಣ್ಣದಿಂದ ಕಂಗೊಳಿಸುವ ಆಸನಗಳು ಸ್ಥಳೀಯರನ್ನು ಸೆಳೆಯುತ್ತಿವೆ. ಕುಳಿತುಕೊಳ್ಳಲು ಹತ್ತಿರ ಹೋದರೆ ತಿಳಿಯುತ್ತೆ ಅವುಗಳ ಮರ್ಮ.

ಹೌದು, ಹೆಚ್.ಜಿ ಕಾಲೇಜು ಮುಂಭಾಗದಲ್ಲಿನ ಪುಟ್ ಪಾತ್, ಲಕ್ಷ್ಮಿ ಗುಡಿ ಮುಂಭಾಗ, ಆರ್.ಡಿ ಪಾಟೀಲ ಕಾಲೇಜು ಮುಂಭಾಗದ ಪುಟ್ ಪಾತ್ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ಬಳಿಯ ಪುಟ್ ಪಾತ್ ಮೇಲೆ ಮರಳು, ಸಿಮೆಂಟ್ ಮಿಶ್ರಿತದಿಂದ ಮಾಡಿರುವ ಆಸನಗಳನ್ನು ಕಳೆದ ಎರಡು ದಿನಗಳ ಹಿಂದೆ ಇಡಲಾಗಿದೆ. ಆದರೆ, ಬಹುತೇಕ ಮುರಿದ ಆಸನಗಳನ್ನು ಇಡಲಾಗಿದೆ.

ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಮಾಧುಗೋಳಕರ ಅವರನ್ನು ಕೇಳಿದರೆ ನಾವು ಇಟ್ಟಿಲ್ಲ. ಆ ರಸ್ತೆ ಪಿಡಬ್ಲುಡಿ ಅವರಿಗೆ ಟೆಂಡರ್ ಆಗಿದೆ. ಅವರೆ ಇಟ್ಟಿರುತ್ತಾರೆ ಅಂತಿದ್ದಾರೆ. ಪಿಡಬ್ಲುಡಿ ಎಇಇ ತಾರಾನಾಥ ರಾಠೋಡ ಅವರನ್ನು ಕೇಳಿದರೆ, ನಾವು ಇಟ್ಟಿಲ್ಲ. ನಮಗೆ ಬರುವುದಿಲ್ಲ ಅದು. ಪುರಸಭೆಯವರು ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಪಟ್ ಪಾತ್ ಮೇಲೆ ಆಸನಗಳನ್ನು ಪಿಡಬ್ಲುಡಿ ಅವರು ಇಟ್ಟಿಲ್ಲ ಅಂತಿದ್ದಾರೆ. ಪುರಸಭೆಯವರು ಇಟ್ಟಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಬಹುತೇಕ ಮುರಿದು ಹೋದ ಆಸನಗಳನ್ನು ಅಲ್ಲಲ್ಲಿ ಇಟ್ಟಿದ್ಯಾರು? ಅವರ ಮೇಲೆ ಇವರು, ಇವರ ಮೇಲೆ ಅವರು ಹಾಕುತ್ತಿದ್ದು, ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಜೊತೆಗೆ ಒಳ್ಳೆಯ ಆಸನಗಳನ್ನು ಇಡುವ ಬದಲು ಮುರಿದು ಹೋಗಿರುವುದು ಇಟ್ಟಿರುವುದು ಯಾವ ಸೌಭಾಗ್ಯಕ್ಕೆ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!