ದೆಹಲಿಯಲ್ಲಿ 10 ಗಂಟೆಗಳ ಕಾಲ ನಿಷೇಧಾಜ್ಞೆ ಸಡಿಲಿಕೆ

355

ನವದೆಹಲಿ: ಕಳೆದ 36 ಗಂಟೆಯಲ್ಲಿ ರಾಷ್ಟ್ರರಾಜಧಾನಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಜನಜೀವನ ಸಹಜಸ್ಥಿತಿಯತ್ತ ನಿಧಾನವಾಗಿ ಮರಳುತ್ತಿದ್ದ. ಹೀಗಾಗಿ ಇಂದು ಬೆಳಗ್ಗೆಯಿಂದ 10 ಗಂಟೆಗಳ ಕಾಲ ನಿಷೇಧಾಜ್ಞೆಯನ್ನ ಸಡಿಲಿಕೆ ಮಾಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಮಾಧ್ಯಮಗಳ ಮುಂದೆ ಬಂದು ಈಶಾನ್ಯ ದೆಹಲಿ ನಾಗರೀಕರು ಫೋಟೋ ನೀಡುವುದಾಗ್ಲಿ, ವಿಡಿಯೋ ಹಂಚಿಕೆ ಮಾಡುವುದಾಗಿ ಮಾಡಬಾರದೆಂದು ದೆಹಲಿ ಪೊಲೀಸ್ರು ಮನವಿ ಮಾಡಿಕೊಂಡಿದ್ದಾರೆ. ಹಾಗೇನಾದ್ರು ಇದ್ರೆ ಪೊಲೀಸ್ರಿಗೆ ನೀಡಿಯೆಂದು ಹೇಳಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 514 ಶಂಕಿತರನ್ನ ಬಂಧಿಸಲಾಗಿದೆ. ದೆಹಲಿ ಪೊಲೀಸ್ ಇಲಾಖೆ ಅಡಿಯಲ್ಲಿ ಅಪರಾಧ ಪಡೆಯ ಎರಡು ವಿಶೇಷ ತಂಡವನ್ನ ರಚಿಸಲಾಗಿದೆ.

ದೆಹಲಿ ದಂಗೆಯಿಂದ ಈಗಾಗ್ಲೇ 38 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಓರ್ವ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. 200 ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!