ಖ್ಯಾತ ಇತಿಹಾಸಕಾರ ಷ.ಶಟ್ಟರ್ ನಿಧನ

491

ಬೆಂಗಳೂರು: ಖ್ಯಾತ ಇತಿಹಾಸಕಾರ ಷ.ಶಟ್ಟರ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 85 ವರ್ಷದ ಹಿರಿಯ ಲೇಖಕ ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನ ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭೂಪಸಂದ್ರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮಸಂಸ್ಕಾರದ ಬಗ್ಗೆ ಕುಟುಂಬಸ್ಥರಿಂದ ಯಾವುದೇ ಮಾಹಿತಿ ಬಂದಿಲ್ಲ. ಬಳ್ಳಾರಿಯ ಹಂಪಾಸಾಗರದಲ್ಲಿ 1935 ಡಿಸೆಂಬರ್ 11ರಂದು ಜನಿಸಿದ್ದು ಷ.ಶಟ್ಟರ್, ಮೈಸೂರು, ಧಾರವಾಡ ಹಾಗೂ ಕ್ರೇಂಬಿಡ್ಜ್ ವಿವಿಯಲ್ಲಿ ವ್ಯಾಸಂಗ ಮಾಡಿದ್ದಾರೆ.

ಭಾಷೆ, ಸಂಸ್ಕೃತಿ, ಇತಿಹಾಸ, ಶಾಸನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಲೇಖನಗಳನ್ನ ಬರೆದಿರುವ ಷ.ಶಟ್ಟರ್ ಅವರು ಹಲವು ಮಹತ್ವದ ಕೃತಿಗಳನ್ನ ನೀಡಿದ್ದಾರೆ. ತಮ್ಮ ಕರಾರುವಕ್ಕಾದ ಬರವಣಿಗೆಯಿಂದ ಅಪಾರ ಖ್ಯಾತಿಯನ್ನ ಷ.ಶೆಟ್ಟರ್ ಅವರು ಹೊಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!