ಬಿಳಿ ವಸ್ತ್ರ ಧರಿಸದಕ್ಕೆ ಯೋಗಕ್ಕೆ ಬಿಡದ ಪೊಲೀಸರು

194

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಇಂದು ಎಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಸಲಾಗುತ್ತಿದೆ. ಅದೆ ರೀತಿ ಜಿಲ್ಲೆಯ ಐತಿಹಾಸಿಕ ಪಟ್ಟದಕಲ್ಲು ಆವರಣದಲ್ಲಿ ಯೋಗ ದಿನ ಆಯೋಜಿಸಲಾಗಿತ್ತು. ಆದರೆ, ಬಿಳಿ ಬಟ್ಟೆ ಧರಿಸದೆ ಬಂದಿದ್ದಾರೆ ಅನ್ನೋ ಕಾರಣಕ್ಕೆ ಗ್ರಾಮಸ್ಥರಿಗೆ ಒಳಗೆ ಬಿಟ್ಟಿಲ್ಲವಂತೆ.

ಯೋಗ ದಿನದಲ್ಲಿ ಭಾಗವಹಿಸಿ ಎಂದು ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ. ಆದರೆ, ಹೊಲಗಳಲ್ಲಿ, ಕೂಲಿ ಕೆಲಸ ಮಾಡುವ ಕಾರ್ಮಿಕರು ಯೋಗದಲ್ಲಿ ಭಾಗವಹಿಸಲು ಬಂದರೆ ಬಿಳಿ ಬಟ್ಟೆ ಹಾಕಿಲ್ಲ ಅನ್ನೋ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!