ಭಟ್ಟರ ಜೊತೆ ‘ಗಾಳಿಪಟ’ ಹಾರಿಸಲು ಪ್ರಭುದೇವ ರೆಡಿ?

413

ನಿರ್ದೇಶಕ ಯೋಗರಾಜ ಭಟ್ಟರು ಸೌಥ್ ಇಂಡಿಯನ್ ಸ್ಟಾರ್ ನಟ, ನಿರ್ದೇಶಕ, ಡ್ಯಾನ್ಸರ್, ಕನ್ನಡಿಗ ಪ್ರಭುದೇವ ಅವರನ್ನ ಭೇಟಿ ಮಾಡಿದ್ದಾರೆ. ಈ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

ಯೋಗರಾಜ ಭಟ್ಟರು ಗಾಳಿಪಟ-2 ಸಿನ್ಮಾ ಮಾಡ್ತಿದ್ದು, ಇದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ ನಟಿಸ್ತಿದ್ದಾರೆ. ಇದರ ಜೊತೆಗೆ ಪ್ರಭುದೇವ ಸಹ ಆ್ಯಕ್ಟ್ ಮಾಡಲಿದ್ದಾರೆ ಅನ್ನೋ ಸುದ್ದಿ ಈ ಹಿಂದೆ ಕೇಳಿ ಬಂದಿತ್ತು. ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇರ್ಲಿಲ್ಲ. ಭಟ್ಟರು ಪ್ರಭುದೇವ ಭೇಟಿಯ ಫೋಟೋ ಹಾಕಿ, ನಿಮಗೆ ಗುಡ್ ನ್ಯೂಸ್ ಕಾದಿದೆ ಎಂದು ಹೇಳಿದ್ದಾರೆ. ಹೀಗಾಗಿ ಗಾಳಿಪಟ-2ದಲ್ಲಿ ಇಂಡಿಯನ್ ಡ್ಯಾನ್ಸ್ ಕಿಂಗ್ ನಟಿಸುವುದು ಪಕ್ಕಾ ಅನ್ನೋ ಮಾತುಗಳು ಕೇಳಿ ಬರ್ತಿವೆ.




Leave a Reply

Your email address will not be published. Required fields are marked *

error: Content is protected !!