ಯುವರತ್ನ ಪ್ರಿ ರಿಲೀಸ್ ಎಲ್ಲಿ? ಯಾವಾಗ?

253

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಲ್ಲಿ ಒಂದಾದ್ಮೇಲೆ ಒಂದು ಸ್ಟಾರ್ ಸಿನಿಮಾಗಳು ರಿಲೀಸ್ ಆಗ್ತಿವೆ. ಇದರ ಜೊತೆಗೆ ಸಿನಿಮಾ ಚಿತ್ರಮಂದಿರಕ್ಕೆ ಬರುವ ಮೊದ್ಲು ಪ್ರಿ ರಿಲೀಸ್ ಕಾರ್ಯಕ್ರಮ ಅಬ್ಬರ ಶುರುವಾಗಿದೆ. ಪೊಗರು, ರಾಬರ್ಟ್ ಸಿನಿಮಾ ತಂಡ ಪ್ರಿ ರಿಲೀಸ್ ಕಾರ್ಯಕ್ರಮ ನಡೆಸಿದ್ವು. ಇದೀಗ ಅಪ್ಪು ನಟನೆಯ ಯುವರತ್ನ ಟೀಂ ರೆಡಿಯಾಗಿದೆ.

ಯೆಸ್, ಸಂತೋಷ ಆನಂದರಾಮ ನರ್ದೇಶನದ ಯುವರತ್ನ ಸಿನಿಮಾದ ಪ್ರಿ ರಿಲೀಸ್ ಪ್ರೋಗ್ರಾಮ್ ಮಾರ್ಚ್ 20ರಂದು ಅರಮನೆ ನಗರಿ ಮೈಸೂರಿನಲ್ಲಿ ಆಯೋಜಿಸಲಾಗಿದೆ. ಏಪ್ರಿಲ್ 1ರಂದು ಸಿನಿಮಾ ರಿಲೀಸ್ ಆಗ್ತಿದೆ. ಈ ಚಿತ್ರದಲ್ಲಿ ಪುನೀತಗೆ ಸಯ್ಯೇಶಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಕಾಶ ರಾಜ್, ಧನಂಜಯ, ಸೋನುಗೌಡ ಸೇರಿದಂತೆ ಅನೇಕರು ನಟಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!