84 ಲಕ್ಷದ ಗಾಂಜಾ ಜಪ್ತಿ

242

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯ ವಿವಿಧ ಕಡೆ ಗಾಂಜಾ ಮಾರಾಟ ಮಾಡ್ತಿದ್ದ ಇಬ್ಬರನ್ನ ಬಂಧಿಸಲಾಗಿದೆ. ಕೋರಮಂಗಳ ಠಾಣೆ ಪೊಲೀಸರು 84 ಲಕ್ಷ ಮೌಲ್ಯದ 141 ಕೆಜಿ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಚಡ್ಡ ಕೃಷ್ಣನ್ ಹಾಗೂ ಮೂರ್ತಿ ಎಂಬುವರನ್ನ ಬಂಧಿಸಲಾಗಿದೆ.

ಕೋರಮಂಗಲದ ಬಳ್ಳಾರಿ ಕಾಲೋನಿಯಲ್ಲಿ ಗಾಂಜಾ ಮಾರಾಟ ಮಾಡಲು ಬಂದಾಗ ಆರೋಪಿಗಳನ್ನ ಬಂಧಿಸಲಾಗಿದೆ. 141 ಕೆಜಿ ಗಾಂಜಾ, 1 ಗಾಡಿ, ತೂಕದ ಯಂತ್ರ, ಮಾರಕಾಸ್ತ್ರ ಹಾಗೂ 4 ಸಾವಿರ ರೂಪಾಯಿ ವಶ ಪಡಿಸಿಕೊಳ್ಳಲಾಗಿದೆ. ಆಂಧ್ರದ ವಿಶಾಖಪಟ್ಟಣದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡ್ತಿದ್ರು ಅನ್ನೋದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!