ಲಸಿಕೆ ಪಡೆಯುತ್ತಿದ್ದರೂ ಕೋವಿಡ್ ನಿಯಂತ್ರಣಕ್ಕೆ ಬರ್ತಿಲ್ವಾ?

243

ಪ್ರಜಾಸ್ತ್ರ ಡೆಸ್ಕ್

ಬೆಂಗಳೂರು: ದೇಶದಲ್ಲಿ ಕೋವಿಡ್ 2ನೇ ಅಲೆ ಎದ್ದಿದೆ ಅನ್ನೋದು ಮತ್ತೆ ಆತಂಕಕ್ಕೆ ದೂಡಿದೆ. ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಈಗ ಎಲ್ಲರಿಗೂ ಲಾಕ್ ಡೌನ್ ಪ್ರಶ್ನೆ ಎದುರಾಗಿದೆ. ಮಾಧ್ಯಮಗಳಲ್ಲಿ ಪದೆಪದೆ ಲಾಕ್ ಡೌನ್ ಸುದ್ದಿ ಹಬ್ಬಿಸಿ ಜನರಿಗೆ ಮತ್ತೆ ಸಂಕಷ್ಟಕ್ಕೆ ತಳ್ಳುವ ಪ್ರಯತ್ನ ನಡೀತಿದೆ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.

ಬಹುಮುಖ್ಯವಾಗಿ ಸಾರ್ವಜನಿಕರಲ್ಲಿ ಮೂಡಿರುವ ಪ್ರಶ್ನೆ, ಕೋವಿಡ್ ಲಸಿಕೆಯನ್ನ ಜನರು ಪಡೆಯುತ್ತಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವೇನು? ವಾಕ್ಸಿನ್ ಕೊರತೆ ಆಗ್ತಿದೆ ಎಂದು ಶಾಸಕರು, ಸಚಿವರು ಹೇಳ್ತಿದ್ರೂ ಸರ್ಕಾರ ಅದರ ಬಗ್ಗೆ ಯಾಕೆ ಗಮನ ಹರಿಸ್ತಿಲ್ಲ? ಫೇಕ್ ಕೋವಿಡ್ ವರದಿಗಳು ನಡೆಯುತ್ತಿವೆ ಅನ್ನೋದರ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಂದ್ಮೇಲೂ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ಎಷ್ಟು ಸರಿ ಎಂದು ಕೇಳ್ತಿದ್ದಾರೆ.

ದೇಶದಲ್ಲಿ ಈಗಾಗ್ಲೇ ಹಂತ ಹಂತವಾಗಿ ಕೋವಿಡ್ ಲಸಿಕೆಯನ್ನ ನೀಡಲಾಗ್ತಿದೆ. ದೇಶದ ಜನತೆಗೆ ಲಸಿಕೆ ಸಂಪೂರ್ಣವಾಗಿ ಲಭ್ಯವಾಗುತ್ತೋ ಇಲ್ವೋ ಅನ್ನೋದು ಗೊತ್ತಾಗುವ ಮೊದ್ಲೇ ಹಲವಾರು ದೇಶಗಳಿಗೆ ರವಾನೆ ಮಾಡುವ ಮೂಲಕ ಕೇಂದ್ರ ಸರ್ಕಾರ ಏನು ಸಾಧಿಸಿತು ಅನ್ನೋದು ತಿಳಿಯುತ್ತಿಲ್ಲ. ರಾಜ್ಯಗಳು ಲಸಿಕೆ ಕಿಟ್ ಕೇಳ್ತಿದ್ರೂ ಸರಿಯಾಗಿ ಪೂರೈಕೆ ಮಾಡ್ತಿಲ್ಲ. ಕೋವಿಡ್ 2ನೇ ಅಲೆಗೆ ವೈಜ್ಞಾನಿಕ ಕಾರಣವೇನು ಅನ್ನೋದರ ತನಿಖೆ ನಡೆಸದೆ ಇರುವ ಸರ್ಕಾರದ ಜಾಣ ಕುರುಡು ತನಕ್ಕೆ ಸಾಕ್ಷಿ ಎಂದು ಜನರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!