ಅದೊಂದು ಯಡವಟ್ಟಿನಿಂದ ಎರಡು ಜೀವಗಳು ಬಲಿ

264

ಪ್ರಜಾಸ್ತ್ರ ಸುದ್ದಿ

ಪೆದ್ದಪಲ್ಲಿ: ಮನೆಯವರ ಸಣ್ಣದೊಂದು ಯಡವಟ್ಟಿನಿಂದ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿರುವ ಘಟನೆಯ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಅಷ್ಟಕ್ಕೂ ಆಗಿದ್ದು ಏನಂದ್ರೆ, ವಿಷಪೂರಿತ ಕಲ್ಲಂಗಡಿ ಹಣ್ಣು ತಿಂದಿರುವುದು ಎನ್ನಲಾಗ್ತಿದೆ.

ಕರೀಮನಗರದ ಶಿವಾನಂದು(12) ಹಾಗೂ ಚರಣ(10) ಮೃತಪಟ್ಟ ಬಾಲಕರಾಗಿದ್ದಾರೆ. ಗುಣವತಿ, ಶ್ರೀಶೈಲಂ ಹಾಗೂ ಸರಮ್ಮಲ ಅನ್ನೋ ಮೂವರ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ಮುಂದುವರೆಸಲಾಗಿದೆ.

ಘಟನೆ ಹಿನ್ನೆಲೆ:

ಶ್ರೀಶೈಲಂ ಎಂಬುವರ ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದರಿಂದ ಇಲಿ ಪಾಶಾಣ ತಂದು ಮನೆಯಲ್ಲಿಟ್ಟಿದೆ. ಅದನ್ನು ಕೆಲವು ಕಡೆ ಸಿಂಪಡಣೆ ಮಾಡಲಾಗಿದೆ. ಹೀಗಿರುವಾಗ ಅರ್ಧ ತಿಂದ ಕಲ್ಲಂಗಡಿ ಹಣ್ಣನ್ನ ಕಪ್ ಬೋರ್ಡ್ ನಲ್ಲಿಟ್ಟಿದ್ದಾರೆ. ಅದನ್ನ ಇಲಿ ತಿಂದಿದೆ. ಇದು ತಿಳಿಯಲಿದೆ ಉಳಿದ ಅರ್ಧ ಹಣ್ಣನ್ನ ಕುಟುಂಬಸ್ಥರು ರಾತ್ರಿ ತಿಂದಿದ್ದಾರೆ. ಇದರ ಪರಿಣಾಮ ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ಶಿವಾನಂದು, ಚರಣ ಮೃತಪಟ್ಟಿದ್ದಾರೆ. ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿರಳೆ, ಇಲಿ, ಹಲ್ಲಿ, ಇರುವೆ ಸೇರಿದಂತೆ ಕೀಟಗಳನ್ನು ಓಡಿಸಲು ಮನೆಗೆ ತರುವ ಪಾಶಾಣದ ಬಗ್ಗೆ ಎಚ್ಚರಿಕೆಯಿಂದ ಇರಿ. ಸಿಂಪಡಣೆ ಸಂದರ್ಭದಲ್ಲಿ ಹಾಗೂ ಬಳಿಕ ಸರಿಯಾಗಿ ಗಮನ ಹರಿಸಿ. ಇಲ್ಲದೆ ಹೋದ್ರೆ ಇಂತಹದೊಂದು ಅನಾಹುತ ಸಂಭವಿಸಬಹುದು.




Leave a Reply

Your email address will not be published. Required fields are marked *

error: Content is protected !!