ಸುಮನ ಸಂಗಮ ಕಾಡುತೋಟದಲ್ಲಿ ಸ್ವಸ್ಥ ಜೀವನಶೈಲಿ ಶಿಬಿರ

413

ಪ್ರಜಾಸ್ತ್ರ ಸುದ್ದಿ

ಧಾರವಾಡ: ಸ್ವಯಂದೀಪ ಝೆನ್ ಕೇಂದ್ರ ಧಾರವಾಡ ವತಿಯಿಂದ ಸ್ವಸ್ಥ ಜೀವನಶೈಲಿ ಶಿಬಿರವನ್ನ ಆಯೋಜಿಸಲಾಗಿದೆ. ಏಪ್ರಿಲ್ 17 ರಿಂದ 25ರವರೆಗೂ ದಡ್ಡಿ ಕಮಲಾಪುರ ಹಳ್ಳಿಯಲ್ಲಿನ ಸುಮನ ಸಂಗಮ ಕಾಡು ತೋಟದಲ್ಲಿ ಶಿಬಿರ ನಡೆಯಲಿದೆ.

ಬೊಜ್ಜು, ಸಕ್ಕರೆ ಕಾಯಿಲೆ, ರಕ್ತದ ಒತ್ತಡ ಸೊಂಟನೋವು, ಮಲಬದ್ಧತೆ ಸೇರಿದಂತೆ ಇತರೆ ಕಾಯಿಲೆ ಇರುವವರು ಇದರಲ್ಲಿ ಭಾಗವಹಿಸಬಹುದು. ಶಿಬಿರದಲ್ಲಿ ಸಕ್ಕರೆ, ಬೆಲ್ಲ, ಎಣ್ಣೆ, ಹಾಲು ಮತ್ತು ಹಾಲಿನ ಉತ್ಪನ್ನ ಬಳಸದೆ ಅಡುಗೆ ಮಾಡುವುದು ಹೇಗೆ ಮತ್ತು ಏಕೆ ಎಂಬುದರ ತರಬೇತಿ ಮತ್ತು ವಿಚಾರ ವಿನಿಮಯ ಮಾಡಲಾಗುತ್ತೆ.

ಇದರ ಜೊತೆಗೆ ಎರಡು ದಿನ ನಿರಗ್ನಿ ಊಟ ಇರುತ್ತದೆ. ಧ್ಯಾನ, ಶ್ರಮದಾನ, ಏಕಾಂತ ಸಮಯ, ಕತ್ತಲೆ ನಡಿಗೆ, ಶಿಬಿರಾಗ್ನಿ, ವಿಡಿಯೋ ಪ್ರದರ್ಶನ, ಚಿಂತನೆ, ಅರಣ್ಯ ಸ್ನಾನ, ಕೌಶಲ್ಯ ವಿನಿಮಯ, ಹಾಡು ಕುಣಿತ ಸಹ ಇರುತ್ತದೆ. ಏಪ್ರಿಲ್ 16ರ ಸಂಜೆಯೊಳಗೆ ಸುಮನ ಸಂಗಮ ಕಾಡುತೋಟ ತಲುಪಬೇಕು. 15 ಜನರಿಗೆ ಮಾತ್ರ ಅವಕಾಶವಿದ್ದು ಹೆಚ್ಚಿನ ಮಾಹಿತಿಗಾಗಿ ರಜನಿ ಗಿರೀಶ(8130111275) ಹಾಗೂ ನೈದಿಲೆ ಕುಲಕರ್ಣಿ(7813926701) ಅವರನ್ನ ಸಂಪರ್ಕಿಸಬಹುದು ಎಂದು ಡಾ.ಸಂಜೀವ ಕುಲಕರ್ಣಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!