ಬೇಸಿಗೆ ಬಿಸಿ ಕಡಿಮೆಯಾಗಲು ಮಾವಿನಕಾಯಿ ಶರಬತ್

440

ಪ್ರಜಾಸ್ತ್ರ ಸುದ್ದಿ

ಬೇಸಿಗೆ ಶುರುವಾಗಿದೆ. ಎಲ್ಲೆಲ್ಲೂ ಬಿಸಿಲಿನ ಝಳ ಹೆಚ್ಚಾಗ್ತಿದೆ. ಹೊರಗೆ ಹೋದ್ರೂ ಕಷ್ಟ. ಮನೆಯೊಳಗಿದ್ದರೂ ಕಷ್ಟ. ಹೀಗಾಗಿ ಮಜ್ಜಿಗೆ, ಮೊಸರು, ಹಣ್ಣಿನ ಜ್ಯೂಸ್, ಎಳೆನೀರು, ಕಬ್ಬಿನಹಾಲು, ಕೂಲ್ ಡ್ರಿಂಕ್ಸ್ ಮೊರೆ ಹೋಗಲಾಗುತ್ತೆ. ಮಾರುಕಟ್ಟೆಯಲ್ಲಿ ಇದೆಲ್ಲ ಹೆಚ್ಚು ಮಾರಾಟವಾಗುತ್ತೆ. ಕೆಲವೊಂದಿಷ್ಟು ಪಾನಿಯಗಳನ್ನು ಮನೆಯಲ್ಲಿಯೇ ಮಾಡಿಕೊಂಡು ಕುಡಿಯಬಹುದು. ಅದರಲ್ಲಿ ಮಾವಿನಹಣ್ಣಿನ ಜ್ಯೂಸ್ ಒಂದಾಗಿದೆ.

ಮಾವಿನ ಹಣ್ಣನ್ನು ತುರಿದಿಟ್ಟುಕೊಳ್ಳಿ. ಅದಕ್ಕೆ ಸ್ವಲ್ಪ ಪುದೀನಾ, ನಿಂಬೆ ರಸ, ಐಸ್ ಕ್ಯೂಬ್, ರುಚಿಗೆ ತಕ್ಕಟ್ಟು ಸಕ್ಕರೆ ಹಾಗೂ ನೀರು ಸೇರಿಸಿ ಮಿಕ್ಸ್ ಗೆ ಹಾಕಿ. ನಿಮ್ಗೆ ಎಷ್ಟು ಸಣ್ಣಗೆ ಬೇಕೋ ಅಷ್ಟು ರುಬ್ಬಿ. ಗಟ್ಟಿ ಎನಿಸಿದ್ರೆ ಇನ್ನು ಸ್ವಲ್ಪ ನೀರು ಹಾಕಿ ಮತ್ತೆ ರುಬ್ಬಿ. ಬಳಿಕ ಸೋಸಿಕೊಂಡು ಮಸ್ತ್ ಮಾವಿನಕಾಯಿ ಶರಬತ್ ಸವಿರಿ.




Leave a Reply

Your email address will not be published. Required fields are marked *

error: Content is protected !!