210 ಜನರಲ್ಲಿ ಸೋಂಕು.. 12 ಸಾವು..

373

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು ರಾಜ್ಯದಲ್ಲಿಂದು 210 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ರಾಜ್ಯದಲ್ಲಿ 7,944ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇನ್ನು 12 ಜನರು ಸಾವನ್ನಪ್ಪಿದ್ದು, 114ಕ್ಕೆ ಏರಿಕೆಯಾಗಿದೆ.

ಇಂದು 179 ಜನ ಡಿಸ್ಚಾರ್ಜ್ ಆಗುವ ಮೂಲಕ 4,983 ಜನರು ಇದುವರೆಗೂ ಗುಣಮುಖರಾಗಿದ್ದಾರೆ. ಇನ್ನು 2,843 ಪ್ರಕರಣಗಳು ಚಾಲ್ತಿಯಲ್ಲಿವೆ. ಇನ್ನು ಬೆಂಗಳುರು ನಗರದಲ್ಲಿ 8 ಜನ, ಕೊಪ್ಪಳ 1, ಬೀದರ 1, ವಿಜಯಪುರ 1 ಹಾಗೂ ಕಲಬುರಗಿಯಲ್ಲಿ 1 ಸಾವು ಪ್ರಕರಣ ದಾಖಲಾಗಿದೆ. ಜಿಲ್ಲಾವಾರು ಸೋಂಕಿತರ ಲಿಸ್ಟ್ ಇಲ್ಲಿದೆ..

ಬಳ್ಳಾರಿ 48, ಕಲಬುರಗಿ 48, ದಕ್ಷಿಣ ಕನ್ನಡ 23, ರಾಮನಗರ 21, ಬೆಂಗಳೂರು ನಗರ 17, ಯಾದಗಿರಿ 8, ಮಂಡ್ಯ 7, ಬೀದರ 6, ಗದಗ 5, ರಾಯಚೂರು 4, ಹಾಸನ 4, ಧಾರವಾಡ 4, ದಾವಣಗೆರೆ 3, ಚಿಕ್ಕಮಗಳುರು 3, ವಿಜಯಪುರ 2, ಮೈಸೂರು 2, ಉತ್ತರ ಕನ್ನಡ 2, ಬಾಗಲಕೋಟೆ 1, ಶಿವಮೊಗ್ಗ 1 ಹಾಗೂ ಕೊಪ್ಪಳದಲ್ಲಿ 1 ಸೋಂಕಿತ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!