ಸಿಂದಗಿಯಲ್ಲಿ ಕೋವಿಡ್ 19ಗೆ ಮೊದಲ ಸಾವು

1557

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಕರೋನಾ ವೈರಾಣುವಿಗೆ ಮೊದಲ ಸಾವು ಸಂಭವಿಸಿದೆ. 66 ವರ್ಷದ ವೃದ್ಧೆ ಕೋವಿಡ್ 19ಗೆ ಬಲಿಯಾಗಿದ್ದಾರೆ. ರೋಗಿ ಸಂಖ್ಯೆ 7,835 ಆಗಿದ್ದು, ಕಳೆದ ಜೂನ್ 15ರಂದು ವಿಜಯಪುರದ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ರು.

ಪಟ್ಟಣದ ನಿವಾಸಿಯಾಗಿದ್ದ 66 ವರ್ಷದ ವೃದ್ಧೆಗೆ ಜ್ವರ, ತೀವ್ರ ಉಸಿರಾಟದ ತೊಂದರೆ ಎಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧುವಾರ ಮಧ್ಯಾಹ್ನ ವೃದ್ಧೆ ಸಾವನ್ನಪ್ಪಿದ್ದು, ಕರೋನಾ ಪರೀಕ್ಷೆ ನಡೆಸಲಾಗಿತ್ತು. ಅದರ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಸಿಂದಗಿ ತಾಲೂಕಿನಲ್ಲಿ ಮೊದಲ ಕರೋನಾ ಸಾವು ದಾಖಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಇನು ವೃದ್ಧೆಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯ ನಡೆದಿದೆ. ಇದುವರೆಗೂ ತಾಲೂಕಿನಲ್ಲಿ 42 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 30 ಜನರು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ತಾಲೂಕಿನ ಜನತೆ ಬೇಜವಾಬ್ದಾರಿಯಿಂದ ವರ್ತಿಸದೆ, ಮಾಸ್ಕ್ ಧರಿಸಬೇಕು. ಆಗಾಗ ಸ್ಯಾನಟೈಸರ್ ನಿಂದ ಕೈ ತೊಳೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಈ ಮೂಲಕ ಸೋಂಕಿನಿಂದ ಎಚ್ಚರಿಕೆ ವಹಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!