ಗುಜರಾತ್ ನಲ್ಲಿ ಸೇತುವೆ ಬಿದ್ದು 40 ಜನರ ಸಾವು

374

ಪ್ರಜಾಸ್ತ್ರ ಸುದ್ದಿ

ಅಹ್ಮದಾಬಾದ್: ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿನ ಮಚ್ಚು ನದಿಗೆ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದ ಪರಿಣಾಮ ದೊಡ್ಡ ದುರಂತ ಸಂಭವಿಸಿದೆ. ಭಾನುವಾರ ಸಂಜೆ ನಡೆದ ಘಟನೆಯಲ್ಲಿ 40 ಜನರು ಪ್ರಾಣ ಕಳೆದುಕೊಂಡಿದ್ದಾರಂತೆ. 400ಕ್ಕೂ ಹೆಚ್ಚು ಜನರು ನದಿಗೆ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ.

ಕೇಬಲ್ ಮೂಲಕ ನಿರ್ಮಿಸಲಾಗಿದ್ದ ಈ ಸೇತುವೆ ಕಳೆದ ಒಂದು ವಾರದ ಹಿಂದೆಯಷ್ಟೇ ಉದ್ಘಾಟನೆಗೊಂಡಿದೆ. ಪಾರಂಪರಿಕ ಸೇತುವೆಯನ್ನು ಇತ್ತೀಚೆಗೆ ರಿಪೇರಿ ಕೆಲಸ ಮಾಡಿ ಮರಳಿ ಸಂಚಾರಕ್ಕೆ ಬಿಡಲಾಗಿತ್ತು. 100 ಅಗ್ನಿಶಾಮಕ ವಾಹನಗಳು ಬಂದಿದ್ದು, ರಕ್ಷಣಾ ಕಾರ್ಯ ನಡೆಸಿವೆ. ಇನ್ನು ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ.

ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಪಿಎಂಎನ್ಆರ್ ಎಫ್ ಮೂಲಕ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಧನವನ್ನು ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಕಾರ್ಯಾಲಯದಿಂದ ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!