Search

ಸೌಥ್ ಆಫ್ರಿಕಾ ಎದುರು ಎಡವಿದ ಭಾರತ

141

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡ ಸೌಥ್ ಆಫ್ರಿಕಾ ಎದುರು ಸೋಲು ಅನುಭವಿಸಿದೆ. ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ರೋಹಿತ್ ಶರ್ಮಾ ಲೆಕ್ಕಾಚಾರವನ್ನು ಆಫ್ರಿಕಾ ಬೌಲರ್ ಗಳಾದ ನಿಗಿಡಿ ಹಾಗೂ ಪರ್ನಲ್ ಉಲ್ಟಾ ಮಾಡಿದರು.

ನಿಗಿಡಿ, ಪರ್ನಲ್ ಬೌಲಿಂಗ್ ದಾಳಿಗೆ ಭಾರತದ ಬ್ಯಾಟ್ಸಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ಹೀಗಾಗಿ ಕೆ.ಎಲ್ ರಾಹುಲ್ 9, ರೋಹಿತ್ ಶರ್ಮಾ 15, ಕೊಹ್ಲಿ 12, ದೀಪಕ್ ಹೂಡಾ 0,  ಹಾರ್ದಿಕ್ ಪಾಂಡ್ಯ 2, ದಿನೇಶ್ ಕಾರ್ತಿಕ್ 6, ರವಿಚಂದ್ರನ್ ಅಶ್ವಿನ್ 7 ರನ್ ಗಳಿಗೆ ಔಟ್ ಆದರು.

ಹಿಂದಿನ ಪಂದ್ಯದಲ್ಲಿ ಅಮೋಘ ಅರ್ಧಶತಕ ದಾಖಲಿಸಿದ್ದ ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟ ಮಾಡಿ 68 ರನ್ ಗಳಿಸಿದರಿಂದಾಗಿ 9 ವಿಕೆಟ್ ನಷ್ಟಕ್ಕೆ 133 ರನ್ ಗಳನ್ನು ಗಳಿಸಿತು. ಆಫ್ರಿಕಾ ಪರ ನಿಗಡಿ 4, ಪರ್ನಲ್ 3 ವಿಕೆಟ್ ಪಡೆದು ಮಿಂಚಿದರು. ನಾರ್ಟೆಜ್ 1 ವಿಕೆಟ್ ಪಡೆದ.

ಸಾಧಾರಣ ಸ್ಕೋರ್ ಬೆನ್ನುಹತ್ತಿದ ಆಫ್ರಿಕಾ ತಂಡ 5 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿತು. ಮಿಲ್ಲರ್ ಅಜೇಯ 59, ಮಾರ್ಕಮ್ 52 ರನ್ ಗಳ ಆಟದಿಂದಾಗಿ 19.4 ಓವರ್ ಗಳಲ್ಲಿ 5 ವಿಕೆಟ್ ಗೆ 137 ರನ್ ಗಳಿಸಿ ಗೆಲುವು ಸಾಧಿಸಿತು. ಡಿ ಕಾಕ್ 1, ಟಿಂಬಾ 10, ರೋಸ್ವೊ 0, ಸ್ಟುಬ್ಸ್ 6 ರನ್ ಗಳಿಸಿ ಔಟ್ ಆದರು. ಮಿಲ್ಲರ್ 59, ಪರ್ನಲ್ 2 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ ಪರ ಅರ್ಷದೀಪ್ ಸಿಂಗ್ 2, ಅಶ್ವಿನ್, ಪಾಂಡ್ಯ, ಶಮಿ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!