ಬ್ರೇಕಿಂಗ್ ನ್ಯೂಸ್
Search

408 ರನ್ ಗಳಿಗೆ ಆಫ್ರಿಕಾ ಆಲೌಟ್

193

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸೆಂಚುರಿಯನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಫ್ರಿಕಾ 408 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ 101 ರನ್ ಗಳ ಮುನ್ನಡೆ ಸಾಧಿಸಿದೆ.

ಟೆಸ್ಟ್ ಕ್ರಿಕೆಟ್ ನ ಕೊನೆಯ ಪಂದ್ಯ ಆಡುತ್ತಿರುವ ಡೇನ್ ಎಲ್ಗರ್ ಬರೋಬ್ಬರಿ 185 ರನ್ ಗಳಿಸಿ ಔಟ್ ಆದರು. ಡೇವಿಡ್ ಬೆಡಂಗಮ್ 56, ಮಾರ್ಕ್ ಜಾನ್ಸನ್ ಅಜೇಯ 84 ರನ್ ಗಳಿಸಿದರು. ಭಾರತ ಪರ ಜಸ್ಪ್ರಿತ್ ಬೂಮ್ರಾ 4 ವಿಕೆಟ್ ಪಡೆದು ಮಿಂಚಿದರು. ಸಿರಾಜ್ 2, ಶ್ರಾದ್ಧೂಲ್ ಠಾಕೂರ್, ಪ್ರಸಿದ್ಧ ಕೃಷ್ಣ, ಅಶ್ವಿನ್ ತಲಾ 1 ವಿಕೆಟ್ ಪಡೆದರು.

2ನೇ ಇನ್ನಿಂಗ್ಸ್ ಆಡುತ್ತಿರುವ ಟೀಂ ಇಂಡಿಯಾ 3ನೇ ದಿನದಾಟದ ಅಂತ್ಯಕ್ಕೆ 62 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಜೈಸ್ವಾಲ್ 5, ನಾಯಕ ರೋಹಿತ್ ಶರ್ಮಾ 0 ಹಾಗೂ ಗಿಲ್ 26 ರನ್ ಗಳಿಗೆ ಔಟ್ ಆಗಿದ್ದಾರೆ. ಕೊಹ್ಲಿ 18, ಶ್ರೇಯಸ್ ಅಯ್ಯರ್ 6 ರನ್ ಗಳೊಂದಿಗೆ ಆಡುತ್ತಿದ್ದಾರೆ. ರಬಡಾ, ಬರ್ಗರ್, ಜಾನ್ಸನ್ ತಲಾ 1 ವಿಕೆಟ್ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!