‘ತೂಫಾನ್’ ಎಬ್ಬಿಸಿದ ಕೆಜಿಎಫ್-2

422

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಹೀರೋ ವರ್ಣಿಸುವ ತೂಫಾನ್ ಸಾಂಗ್ ಭರ್ಜರಿ ಸೌಂಡ್ ಮಾಡುತ್ತಿದೆ.

ಈಗಾಗ್ಲೇ ಕೆಜಿಎಫ್-1 ದಾಖಲೆ ಮಾಡಿದೆ. ಇದೀಗ ಭಾಗ-2ರ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸಧ್ಯ ಲಿರಿಕಲ್ ಹಾಡು ಯಶ್ ಅಭಿಮಾನಿಗಳಿಗೆ ಹಬ್ಬವಾಗಿದೆ. ರವಿ ಬ್ರಸೂರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಭಾಗ-2ರಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್, ಬಹುಭಾಷಾ ನಟ ಪ್ರಕಾಶ್ ರೈ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ಕಲಾವಿದರ ಬಳಗವಿದೆ.




Leave a Reply

Your email address will not be published. Required fields are marked *

error: Content is protected !!