ಕೆಜಿಎಫ್-2 ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್

308

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಾಕಿಂಗ್ ಸ್ಟಾರ್ ಯಶ ಅಭಿಮಾನಿಗಳು ಉಸಿರು ಬಿಗಿಹಿಡಿದುಕೊಂಡು ಕಾಯುತ್ತಿರುವ ಕ್ಷಣ ಇದೀಗ ಹತ್ತಿರ ಬಂದಿದೆ. ಕೆಜಿಎಫ್ ಚಿತ್ರ ನೋಡಿದ್ಮೇಲೆ ಯಶ ಅಭಿಮಾನಿಗಳ ಗತ್ತು ಗಮತ್ತು ಬದಲಾಗಿದೆ. ಇದೀಗ ಅವರು ಕೆಜಿಎಫ್ ಚಾಪ್ಟರ್ 2ಗಾಗಿ ಕಾಯುತ್ತಿದ್ದಾರೆ.

ಇದೀಗ ನಿರ್ದೇಶಕ ಪ್ರಶಾಂತ ನೀಲ್ ತಂಡದಿಂದ ಯಶ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಅದುವೆ ಟೀಸರ್ ಬಿಡುಗಡೆ ಮಾಡುವುದು. ಹೌದು, ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಫಸ್ಟ್ ಟೀಸರ್ ಜನವರಿ 8ರಂದು ಬೆಳಗ್ಗೆ 10.18ಕ್ಕೆ ರಿಲೀಸ್ ಮಾಡಲು ಮುಹೂರ್ತ ಫಿಕ್ಸ್ ಮಾಡಲಾಗಿದೆ. ಈ ಬಗ್ಗೆ ಟ್ವೀಟರ್ ನಲ್ಲಿ ಹಂಚಿಕೊಳ್ಳಲಾಗಿದೆ.




Leave a Reply

Your email address will not be published. Required fields are marked *

error: Content is protected !!