ಹುಲಿ ಸಂರಕ್ಷಣಾ ಕಾಡಿಗೆ ರಾಮಾಯಣ ನಂಟು

340

ಪ್ರಜಾಸ್ತ್ರ ಸುದ್ದಿ

ಭಾರತದ ತುಂಬಾ ನಮ್ಗೆ ರಾಮಾಯಣ, ಮಹಾಭಾರತಕ್ಕೆ ಸಂಬಂಧಿಸಿದ ಅನೇಕ ಕುರುಹುಗಳು ಸಿಗ್ತವೆ. ಸಾವಿರಾರು ವರ್ಷಗಳ ಹಿಂದಿನ ಹಲವು ಕಥೆಗಳನ್ನ ಹೇಳುತ್ತವೆ. ಹೀಗಾಗಿ ಈ ನೆಲದಲ್ಲಿ ಸಿಗುವ ಪುರಾತನ ವಸ್ತುಗಳೊಂದಿಗೆ ರಾಮಾಯಣ ಇಲ್ಲವೆ ಮಹಾಭಾರತದ ನಂಟು ಕಂಟು ಬರುತ್ತೆ.

ಇದೇ ರೀತಿ ಮಧ್ಯಪ್ರದೇಶದ ಬಾಂಧವಗಡ ರಾಷ್ಟ್ರೀಯ ಹುಲಿ ಸಂರಕ್ಷಣಾ ಉದ್ಯಾನದಲ್ಲಿ ಪುರಾತನವಾದ ವಿಷ್ಣುವಿನ ಮೂರ್ತಿ ಪತ್ತೆಯಾಗಿದೆ. ಈ ಬಗ್ಗೆ ಅರಣ್ಯ ಸೇವಾಧಿಕಾರಿ ಪ್ರವೀಣ ಕಸ್ವಾನ್ ಎಂಬುವರು ಟ್ವೀಟ್ ಮೂಲಕ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ತಲಾ ಕೊಳಕ್ಕೆ ಮೂಲವಾಗಿರುವ ಚಕ್ರಧಾರಾ ಝರಿ ಉಗಮಿಸುವ ಜಾಗದಲ್ಲಿ ಮಲಗಿರುವ ಸ್ಥಿತಿಯಲ್ಲಿರುವ ವಿಷ್ಣುವಿನ ವಿಗ್ರಹ ಕಂಡು ಬಂದಿದೆ. ಇದು ಸಾವಿರ ವರ್ಷಗಳ ಹಿಂದಿನದಾಗಿರಬಹುದು ಅಂತಾರೆ. ಅಲ್ಲದೇ, ಹಸಿರು ಪಾಚಿಗಟ್ಟಿದಂತೆ ಕಾಣುವ ಕೊಳದಲ್ಲಿ ಅಪಾರ ಪ್ರಮಾಣದಲ್ಲಿ ಬ್ಯಾಕ್ಟೇರಿಯಾ ಇವೆ. ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪತ್ತಿ ಮಾಡುತ್ತವೆ. ಮತ್ತು ಸುತ್ತಲಿನ ಭೂಮಿಯನ್ನ ಹಸಿಯಾಗಿಡುತ್ತವೆ ಎಂದು ಬರೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!