ಹೆಲ್ತ್ ಬುಲೆಟಿನ್: ಬೆಳಗಾವಿ ಪ್ರಕರಣಗಳು ಮಿಸ್ ಆಯ್ತಾ?

327

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಇಂದು ಬಂದ ಕರೋನಾ ಹೆಲ್ತ್ ಬುಲೆಟಿನ್ ನಲ್ಲಿ 267 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದಿದೆ. ಅದರಲ್ಲಿ ಕಲಬುರಗಿ 105, ಉಡುಪಿ 62, ರಾಯಚೂರು 35, ಬೆಂಗಳೂರು ನಗರ 20, ಮಂಡ್ಯ 13, ಯಾದಗಿರಿ 9, ವಿಜಯಪುರ 6, ದಾವಣಗೆರೆ 3, ದಕ್ಷಿಣ ಕನ್ನಡ, 2, ಬಾಗಲಕೋಟೆ 2, ಶಿವಮೊಗ್ಗ 2, ಕೋಲಾರ 2, ಮೈಸೂರು 2, ಬಳ್ಳಾರಿ 1, ಧಾರವಾಡ 1, ಹಾಸನ 1 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 1 ಎಂದಿದೆ. ಬೆಳಗಾವಿ 0 ಎಂದಿದೆ.

ಆದ್ರೆ, ಜಿಲ್ಲಾ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಲ್ಲಿ ಬೆಳಗಾವಿ ತಾಲೂಕಿನಲ್ಲಿ 12 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗ್ತಿದೆ. ಆದ್ರೆ, ಇದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಇಲ್ಲ. ಹಾಗಾದ್ರೆ ಎಲ್ಲಿ ಮಿಸ್ಟೇಕ್ ಆಯ್ತು? ಯಾರ ತಪ್ಪು? ಒಂದು ವೇಳೆ ಎಣಿಕೆಯಲ್ಲಿ ಮಿಸ್ ಆಗಿದ್ರೆ ಹಲವು ಅನುಮಾನಗಳಿಗೆ ದಾರಿಯಾಗುತ್ತೆ. ದೃಢಪಟ್ಟಿದ್ದು ನಿಜವಾದ್ರೆ 279 ಜನರಲ್ಲಿ ಸೋಂಕು ಆಗುತ್ತೆ.




Leave a Reply

Your email address will not be published. Required fields are marked *

error: Content is protected !!