ಗುಜರಾತನಲ್ಲಿ ಫ್ಯಾಕ್ಟರಿ ಸ್ಫೋಟ್: 5 ಸಾವು, 2 ಗ್ರಾಮಗಳ ಜನರ ಸ್ಥಳಾಂತರ

346

ಪ್ರಜಾಸ್ತ್ರ ಸುದ್ದಿ

ದಹೇಜ್: ನಗರದ ಹೊರವಲಯದಲ್ಲಿರುವ ಕಾರ್ಖಾನೆ ಸ್ಫೋಟದಿಂದಾಗಿ 5 ಜನ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ರಾಸಾಯನಿಕ ಕಾರ್ಖಾನೆ ಸ್ಫೋಟಗೊಂಡ ಪರಿಣಾಮ ಈ ಅನಾಹುತ ಸಂಭವಿಸಿದೆ.

ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಬಂದಿದ್ದು, ಅಗ್ನಿ ನಂದಿಸುವ ಕೆಲಸ ಮಾಡ್ತಿವೆ. ಗಾಯಾಳುಗಳನ್ನ ಭಾರುಚ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುತ್ತಲಿನ ಎರಡು ಹಳ್ಳಿಯ ಜನರನ್ನ ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಈ ಫ್ಯಾಕ್ಟರಿ ಯಶಸ್ವಿ ರಾಸಾಯನ ಪ್ರೈವೈಟ್ ಲಿಮಿಟೆಡ್ ಸೇರಿದ್ದಾಗಿದೆ.

ಈ ಫ್ಯಾಕ್ಟರಿಯಲ್ಲಿ 15 ಬೇರೆ ಬೇರೆ ರೀತಿಯ ರಾಸಾಯನಕ ತಯಾರು ಮಾಡಲಾಗ್ತಿದೆ. ಆಂಧ್ರದ ಎಲ್ ಜಿ ಪಾಲಿಮರ್ ಘಟನೆ ಬಳಿಕ ಇದೀಗ ಗುಜರಾತನಲ್ಲಿ ನಡೆದಿದೆ.




Leave a Reply

Your email address will not be published. Required fields are marked *

error: Content is protected !!