ನಾಳೆ ತೆರೆಗೆ ‘ಬಡ್ಡಿಮಗನ ಲೈಫು’

352

ಏನ್ ಚಂದನ ತಕ್ಕೋ ಅನ್ನೋ ಸಾಂಗ್ ಮೂಲಕವೇ ಸಾಕಷ್ಟು ನಿರೀಕ್ಷೆಗಳನ್ನ ಮೂಡಿಸಿರುವ ಬಡ್ಡಿಮಗನ ಲೈಫು ಸಿನ್ಮಾ ನಾಳೆ ರಿಲೀಸ್ ಆಗ್ತಿದೆ. ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಪವನ ನಿರ್ಮಾಣದ್ದಾರೆ. ಪವನ ಹಾಗೂ ಪ್ರಸಾದ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ಗಾಂಧಿನಗರದಲ್ಲಿ ಸೌಂಡ್ ಮಾಡಲು ಬರ್ತಿದೆ.

ಊರಿಗೆಲ್ಲ ಬಡ್ಡಿ ಕೊಟ್ಟು ಲೈಫ್ ನಡೆಸುವ ಬಡ್ಡಿ ಸೀನಪ್ಪನ ಸುತ್ತ ಸುತ್ತುವ ಭರ್ಜರಿ ಕಾಮಿಡಿಯಿರುವ ಸಿನಿಮಾವಾಗಿದೆ. ಮೈಸೂರು ಭಾಗದ ಹಳ್ಳಿಯಲ್ಲಿ ನಡೆಯುವ ಕಾಲ್ಪನಿಕ ಕಥೆಯನ್ನ ಹೊಂದಿದ್ದು ಚಿತ್ರ ರಸಿಕರನ್ನ ರಂಜಿಸಲು ಬರ್ತಿದೆ. ಹೊಸಬರ ಪ್ರಯತ್ನಕ್ಕೆ ಪ್ರೇಕ್ಷಕ ಪ್ರಭು ಎಷ್ಟು ಮಾರ್ಕ್ಸ್ ಕೊಡ್ತಾರೆ ಅನ್ನೋದು ಶುಕ್ರವಾರ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!