ಭರ್ಜರಿ ಶತಕ ಸಿಡಿಸಿದ ಕೆ.ಎಲ್ ರಾಹುಲ್

202

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ನಲ್ಲಿ 8ನೇ ಶತಕ ದಾಖಲಿಸಿದರು.

ಕೆ.ಎಲ್ ರಾಹುಲ್ ಟೆಸ್ಟ್ ಶತಕಗಳ ವಿಶೇಷ ಏನು ಅಂದರೆ 8 ಶತಕಗಳಲ್ಲಿ 7 ಶತಕಗಳು ವಿದೇಶಿ ನೆಲದಲ್ಲಿ ಭಾರಿಸಿದ್ದಾರೆ. ಸೆಂಚುರಿಯನ್ ಸೂಪರ್ ಸ್ಪೋರ್ಟ್ ಮೈದಾನದಲ್ಲಿಯೇ 2 ಶತಕ ಗಳಿಸಿದ್ದಾರೆ. ಆಫ್ರಿಕಾ ನೆಲದಲ್ಲಿ 5 ಶತಕ ಗಳಿಸಿರುವ ಸಚಿನ್ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಜೊತೆಗೆ ರಾಹುಲ್ 2ನೇ ಸ್ಥಾನ ಹಂಚಿಕೊಂಡಿದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 245 ರನ್ ಗಳಿಗೆ ಆಲೌಟ್ ಆಗಿದೆ. ಇದರಲ್ಲಿ ಕೆ.ಎಲ್ ರಾಹುಲ್ 101 ರನ್ ಗಳ ಕಾಣಿಕೆ ಇದೆ. ಆಫ್ರಿಕಾ ಬ್ಯಾಟಿಂಗ್ ಮಾಡುತ್ತಿದ್ದು, 16 ಓವರ್ ಗಳಲ್ಲಿ 49 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!