ಪಾಕ್ ವಿರುದ್ಧ ಕೊಹ್ಲಿ, ರಾಹುಲ್ ಶತಕದಬ್ಬರ

201

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯ ಕಪ್ 2023ರ ಟೂರ್ನಿಯ ಸೂಪರ್ 4ನಲ್ಲಿ ಪಾಕ್ ವಿರುದ್ಧ ಭಾರತ ಭರ್ಜರಿ ಬ್ಯಾಟಿಂಗ್ ಮಾಡಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕ್ ನಾಯಕ ಬಾಬರ್ ಅಜಂ ಲೆಕ್ಕಾಚಾರವನ್ನು ಇಂಡಿಯನ್ ಟೀಂ ಆಟಗಾರರು ತಲೆಕೆಳಗೆ ಮಾಡಿದ್ದಾರೆ.

ಭಾನುವಾರ ಮಳೆಯಿಂದಾಗಿ ಅರ್ಧಕ್ಕೆ ನಿಂತ ಪಂದ್ಯ ಮೀಸಲು ದಿನವಾದ ಇಂದು ಮುಂದುವರೆಯಿತು. ನಿನ್ನೆ ನಾಯಕ ರೋಹಿತ್ ಶರ್ಮಾ 56, ಶುಭನಂ ಗಿಲ್ 58 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿದ್ದರು. ಅದನ್ನು ಕಿಂಗ್ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋದರು.

ಕೊಹ್ಲಿ ಅಜೇಯ 122 ರನ್ ಗಳಿಸುವ ಮೂಲಕ 47ನೇ ಶತಕವನ್ನು ದಾಖಲಿಸಿದರು. ಜೊತೆಗೆ 13 ಸಾವಿರ ರನ್ ಗಳ ಮೈಲುಗಲ್ಲು ದಾಟಿದರು. ಅತಿ ವೇಗವಾಗಿ 13 ಸಾವಿರ ರನ್ ಗಳಿಸಿ ಸಚಿನ್ ತಂಡೂಲ್ಕರ್ ದಾಖಲೆ ಮುರಿದರು. ಇನ್ನು ಕೆ.ಎಲ್ ರಾಹುಲ್ ಅಜೇಯ 111 ರನ್ ಗಳಿಸಿದರು. ಈ ಮೂಲಕ 5ನೇ ಶತಕ ದಾಖಲಿಸಿದರು. ಇದರೊಂದಿಗೆ ಭಾರತ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿ ಪಾಕಿಸ್ತಾನಕ್ಕೆ ದೊಡ್ಡ ಸವಾಲು ನೀಡಿದೆ.




Leave a Reply

Your email address will not be published. Required fields are marked *

error: Content is protected !!