ಸದನಲ್ಲಿ ‘ಪ್ರಜಾಸ್ತ್ರ’ ವಿಶೇಷ ವರದಿ ಪ್ರಸ್ತಾಪ..

371

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಳೆಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಪ್ರಜಾಸ್ತ್ರ ವೆಬ್ ಪತ್ರಿಕೆ ಮಾಡಿದ್ದ ವಿಶೇಷ ವರದಿಯ ಚರ್ಚೆಯಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ ಲ್ಯಾಂಡ್ ಮಾಫಿಯಾ ಬಗ್ಗೆ ಪ್ರಜಾಸ್ತ್ರ ಕಳೆದ ಜುಲೈ 7ರಂದು ‘ಹುಬ್ಬಳ್ಳಿ-ಧಾರವಾಡದಲ್ಲಿ ಮತ್ತೆ ಲ್ಯಾಂಡ್ ಮಾಫಿಯಾ?’ ಅನ್ನೋ ಹೆಸರಿನಲ್ಲಿ ವಿಶೇಷ ವರದಿ ಮಾಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ಅಮೃತ್ ದೇಸಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಗಮನಕ್ಕೆ ತಂದು, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡರು.

http://www.prajaastra.com/land-mafia-hubballi-dharwad-story/

ಬಾಂಡ್ ಮೇಲೆ ಜಾಗವನ್ನು ಅಕ್ರಮ ಸಕ್ರಮ ಮಾಡಿ ಮಾರಾಟ ಮಾಡಲಾಗುತ್ತಿದೆ. ಅನೇಕರಿಗೆ ಖರೀದಿಸಿದ ಬಾಂಡ್ ಸಹ ನೀಡುವುದಿಲ್ಲ. ಹೀಗಾಗಿ ಒಂದೇ ಆಸ್ತಿಯನ್ನು ಮೂರ್ನಾಲ್ಕು ಮಂದಿಗೆ ಮಾರಾಟ ಮಾಡಲಾಗುತ್ತೆ. ಹಣ ಕೊಟ್ಟು ಜಾಗ ಖರೀದಿಸಿದವರಿಗೆ ಅದೆ ಜಾಗ ನೀಡಲು ಮತ್ತೆ 1 ಲಕ್ಷ ರೂಪಾಯಿ ಪಡೆಯುತ್ತಿರುವ ಬಗ್ಗೆ ವಿಶೇಷ ವರದಿ ಮಾಡಿತ್ತು. ಇದರಲ್ಲಿ ಕೆಲ ರೌಡಿಗಳು, ಸ್ವಯಂ ಘೋಷಿತ ಸಾಮಾಜಿಕ ಹೋರಾಟಗಾರರು ಶಾಮೀಲಾಗಿದ್ದಾರೆ ಎಂದು ಸಾಕಷ್ಟು ಆರೋಪಗಳು ಕೇಳಿ ಬಂದಿದ್ವು. ಇದೆ ವಿಚಾರವಾಗಿ ಶಾಸಕ ಅಮೃತ್ ದೇಸಾಯಿ ಸದನದಲ್ಲಿ ಪ್ರಶ್ನಿಸಿ, ಇದಕ್ಕೆ ಕಡಿವಾಣ ಹಾಕಲು ಕೇಳಿಕೊಂಡರು. ಇದು ಪ್ರಜಾಸ್ತ್ರ ವರದಿಯ ದೊಡ್ಡ ಇಂಪ್ಯಾಕ್ಟ್ ಎಂದು ಹೇಳಬಹುದು.




Leave a Reply

Your email address will not be published. Required fields are marked *

error: Content is protected !!