ಏನಿದು ಡಾಲಿ ವಿಡಿಯೋ ಲೀಕ್ ವಿಚಾರ?

260

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಡಾಲಿ ಧನಂಜಯ್ ಸಧ್ಯ ತುಂಬಾ ಬ್ಯುಸಿ ಇರುವ ನಟರಲ್ಲಿ ಒಬ್ಬರು. ತಮ್ಮ ನಟನೆಯಿಂದ ಸೌಥ್ ಸಿನಿ ದುನಿಯಾದಲ್ಲಿ ಮಿಂಚುತ್ತಿದ್ದಾರೆ. ಇಂತಹ ನಟನ ವಿಡಿಯೋ ಲೀಕ್ ಆಗಿದೆಯಾ ಅನ್ನೋ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.

ಅಷ್ಟಕ್ಕೂ ಆಗಿದ್ದು ಏನಂದರೆ ನಟ ಧನಂಜಯ್ ಸ್ನೇಹಿತ ನಟ ನಾಗಭೂಷಣ್ ತಮ್ಮ ಮೊಬೈಲ್ ಕಳೆದು ಹೋಗಿದೆ. ನನಗೆ ಸಂಬಂಧಪಡದ ವಿಷಯಗಳು ಪೋಸ್ಟ್ ಆಗುತ್ತಿವೆ. ನನ್ನ ನಂಬರ್ ನಿಂದ ಯಾರಿಗಾದರೂ ಕಾಲ್ ಅಥವ ಮೆಸೇಜ್ ಬಂದರೆ ನಿರ್ಲಕ್ಷಿಸಿ ಎಂದಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ನಟ ಧನಂಜಯ್, ಯಾಕಪ್ಪ ನಾಗಭೂಷಣ, ಏನೇನಿತ್ತೊ ಮೊಬೈಲಲ್ಲಿ, ಜವಾಬ್ದಾರಿ ಇಲ್ಲ ನಿಂಗೆ, ನಮ್ದೆಲ್ಲ ಏನೇನು ವಿಡಿಯೋ ಕ್ಲಿಪ್ಸ್ ಇತ್ತು ಏನೋ ಎಂದು ಹೇಳುವ ಮೂಲಕ ಸ್ನೇಹಿತನ ಕಾಲೆಳೆದಿದ್ದಾರೆ.

ಕೆಲವರು ಇದು ಟಗರುಪಲ್ಯ ಚಿತ್ರದ ಪ್ರಮೋಷನ್ ಗಿಮಿಕ್ ಅಂತಿದ್ದಾರೆ. ನಟ ನಾಗಭೂಷಣ ಹಾಗೂ ಅಮೃತಾ ಪ್ರೇಮ್ ಕಾಂಬಿನೇಷನ್ ನಲ್ಲಿ ಟಗರುಪಲ್ಯ ಸಿನಿಮಾ ಬರ್ತಿದೆ. ನಟ ಡಾಲಿ ಧನಂಜಯ್ ಅವರು ಡಾಲಿ ಪಿಚ್ಛರ್ಸ್ ಅಡಿಯಲ್ಲಿ ಸಿನಿಮಾ ರೆಡಿಯಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!