ಸಾಹಸ ನಿರ್ದೇಶಕ ಜಾಲಿ ಬಾಸ್ಟನ್ ನಿಧನ

163

ಪ್ರಜಾಸ್ತ್ರ ಸಿನಿಮಾ ಡೆಸ್ಕ್

17ನೇ ವಯಸ್ಸಿಗೆ ಪ್ರೇಮಲೋಕ ಚಿತ್ರದ ಮೂಲಕ ಕನ್ನಡ ಸಿನಿ ರಂಗಕ್ಕೆ ಪ್ರವೇಶ ಪಡೆದಿದ್ದ ಸಾಹಸ ನಿರ್ದೇಶಕ ಜಾಲಿ ಬಾಸ್ಟನ್ ನಿಧನರಾಗಿದ್ದಾರೆ. ಸ್ಟಂಟ್ ಡ್ಯೂಪ್ ಕಲಾವಿದನಾಗಿ ಕೆಲಸ ಶುರು ಮಾಡಿದ ಅವರು ಮುಂದೆ ಸಾಹಸ ನಿರ್ದೇಶಕರಾದರು.

ಬರೋಬ್ಬರಿ 950ಕ್ಕೂ ಹೆಚ್ಚು ಚಿತ್ರಗಳಿಗೆ ಸ್ಟಂಟ್ ಡ್ಯೂಪ್, ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 57 ವರ್ಷದ ಜಾಲಿ ಬಾಸ್ಟನ್ ಅವರು ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಲವು ಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಜೊತೆಗೆ ತಮಿಳು, ಮಲಿಯಾಳಂ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!