ಶ್ರೀ ಸಿದ್ಧಲಿಂಗ ಮಹಾರಾಜರ ರಥೋತ್ಸವ

353

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಓತಿಹಾಳ ಗ್ರಾಮದಲ್ಲಿ ಶ್ರಿ ಸಿದ್ಧಲಿಂಗ ಮಹಾರಾಜರ ಜಾತ್ರೆ ಅದ್ದೂರಿಯಾಗಿ ನಡೆಯಿತು. 28ನೇ ಜಾತ್ರಾ ಮಹೋತ್ಸವ ಅಂಗವಾಗಿ ಗೊಂಬೆಗಳ ಕುಣಿತ, ಡೊಳ್ಳು ಕುಣಿತ, ವಿವಿಧ ಕಲಾ ತಂಡಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.

ಇದಕ್ಕೂ ಮೊದಲು ನಡೆದ ನೂತನ ರಥದ ಲೋಕಾರ್ಪಣೆ, ಪುರಾಣ ಪ್ರವಚನ ಹಾಗೂ ಧರ್ಮಸಭೆಯಲ್ಲಿ ಶ್ರಿ ಬಸವಮಹಾಂತ ಸ್ವಾಮೀಜಿಗಳು, ಗುರುದೇವ ಆಶ್ರಮದ ಶಾಂತಗಂಗಾಧರ ಮಹಾಸ್ವಾಮಿಗಳು ಸೇರಿದಂತೆ ತಾಲೂಕಿನ ವಿವಿಧ ಸ್ವಾಮೀಜಿಗಳು, ಶರಣೆಯರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಮಲ್ಲನಗೌಡ ಪಾಟೀಲ, ರವಿಗೌಡ ಪಾಟೀಲ, ಶಂಕ್ರಪ್ಪ ಮಕಣಾಪುರ, ಶಾಂತಗೌಡ ಬಿರಾದಾರ, ಸಿದ್ದನಗೌಡ ದೇವರೆಡ್ಡಿ, ಕಿರಣಕುಮಾರ ನಾಟಿಕರ, ಮಂಜುನಾಥ ಮಣೂರ, ಶಂಕರಗೌಡ ಜುಮನಾಳ, ಶಂಕರಗೌಡ ಕುಮಸಗಿ, ಶೆಂಕ್ರಪ್ಪ ಮಕಣಾಪುರ ಸೇರಿ ಅನೇಕರು ಉಪಸ್ಥಿತರಿದ್ದರು. ಅದ್ಧೂರಿ ರಥೋತ್ಸವದೊಂದಿಗೆ ಜಾತ್ರೆ ಯಶಸ್ವಿಯಾಗಿ ನೆರವೇರಿತು.




Leave a Reply

Your email address will not be published. Required fields are marked *

error: Content is protected !!