ಬ್ರೇಕಿಂಗ್ ನ್ಯೂಸ್
Search

ಬಿಜೆಪಿ ನಾಯಕಿ ಟ್ವೀಟ್ ಗೆ ಎಲ್ಲೆಡೆ ಆಕ್ರೋಶ

176

ಪ್ರಜಾಸ್ತ್ರ ಸುದ್ದಿ

ನವದೆಹಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಐಕ್ಯತಾ ಯಾತ್ರೆ ತೆಲಂಗಾಣದಲ್ಲಿ ಹಾದು ಹೋಗುತ್ತಿದೆ. ಈ ವೇಳೆ ನಟಿ ಹಾಗೂ ಸಮಾಜಿಕ ಕಾರ್ಯಕರ್ತೆ ಪೂನಂ ಕೌರ್ ಅವರ ಕೈ ಹಿಡಿದು ರಾಹುಲ್ ಹೋಗುತ್ತಿರುವ ಫೋಟೋದೊಂದಿಗೆ ಟ್ವೀಟ್ ಮಾಡಿರುವ ಬಿಜೆಪಿ ನಾಯಕಿ ಪ್ರೀತಿ ಗಾಂಧಿ, ಅವರ ಮುತ್ತಜ್ಜನ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಪೂನಂ ಕೌರ್, ಇದು ನಿಮಗೇ ಸಂಪೂರ್ಣವಾಗಿ ಅವಮಾನಕಾರಿಯಾಗಿದೆ. ಪ್ರಧಾನಿ ನಾರಿಶಕ್ತಿ ಬಗ್ಗೆ ಮಾತನಾಡಿದ್ದು ನೆನಪಿರಲಿ. ನಾನು ಹೆಚ್ಚುಕಡಿಮೆ ಜಾರಿಬಿದ್ದಿದ್ದೆ. ಸರ್ ನನ್ನ ಕೈ ಹಿಡಿದರು ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಇತರೆ ರಾಜಕೀಯ ನಾಯಕರು ಸಹ ಪ್ರೀತಿ ಗಾಂಧಿ ವಿರುದ್ಧ ಕಿಡಿ ಕಾರಿದ್ದಾರೆ. ಮಹಿಳಾ ಎಲ್ಲರಂತೆ ಸಮಾನವಾಗಿ ಬದುಕುವುದನ್ನು ಅವಮಾನಿಸಿದ್ದಾರೆ. ಕೂಡಲೇ ಟ್ವೀಟ್ ಡಿಲಿಟ್ ಮಾಡಿ ಎಂದು ಆಗ್ರಹಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!