ಮೊಮ್ಮಗಳಿಗೆ ಮದುವೆಯಾಗದೆ ಮಗುವಾದರೆ ತೊಂದರೆಯಿಲ್ಲ: ಜಯಾ ಬಚ್ಚನ್

184

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮೊಮ್ಮಗಳು ನವ್ಯಾ ನಂದಾಗೆ ಮದುವೆಯಾಗದೆ ಮಗುವಾದರೆ ಯಾವುದೇ ತೊಂದರೆಯಿಲ್ಲ ಎಂದು ಬಾಲಿವುಡ್ ಹಿರಿಯ ನಟಿ, ರಾಜಕಾರಣಿ ಜಯಾ ಬಚ್ಚನ್ ಹೇಳಿದ್ದಾರೆ. ವಾಟ್ ದಿ ಹೆಲ್ ನವ್ಯಾ ಪಾಡ್ ಕ್ಯಾಸ್ಟ್ ನಲ್ಲಿ ಮಾತನಾಡಿದು ಅವರು ಈ ರೀತಿ ಹೇಳಿದ್ದಾರೆ.

ನನ್ನ ಹೇಳಿಕೆ ಕೆಲವರಿಗೆ ಆಕ್ಷೇಪಾರ್ಹ ಎನಿಸಬಹುದು. ಆದರೆ, ದೈಹಿಕ ಆಕರ್ಷಣೆ ಹಾಗೂ ಹೊಂದಾಣಿಕೆ ಬಹಳ ಮುಖ್ಯ. ದೈಹಿಕ ಆಕರ್ಷಣೆ ಇಲ್ಲದಿದ್ದರೆ ನಮ್ಮ ಸಂಬಂಧಗಳು ಹೆಚ್ಚು ಕಾಲ ಉಳಿಯುವುದಿಲ್ಲ. ನಮ್ಮ ಕಾಲದಲ್ಲಿ ಯಾವುದೇ ರೀತಿಯ ಪ್ರಯೋಗ ಮಾಡಲು ಸಾಧ್ಯವಿರಲಿಲ್ಲ. ಇಂದಿನ ಯುವ ಪೀಳಿಗೆ ಮಾಡುತ್ತೆ ಎಂದಿದ್ದಾರೆ.

ಇದನ್ನು ನಾನು ಯಾವುದೇ ಮುಚ್ಚುಮರೆಯಿಲ್ಲದೆ ಕ್ಲಿನಿಕಲ್ ಆಗಿ ಹೇಳುತ್ತಿದ್ದೇನೆ. ನಿಮ್ಮ ಉತ್ತಮ ಸ್ನೇಹಿತನನ್ನು ಮದುವೆಯಾಗಬೇಕು. ಮಗು ಮಾಡಿಕೊಳ್ಳುವ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಬೇಕು. ಸಮಾಜ ಹೇಳುವ ಪ್ರಕಾರ ಮುಂದೆ ಒಂದು ದಿನ ಮದುವೆಯಾಗಿ ಎಂದಿರುವ ಅವರು, ನನ್ನ ನಂತರ ಮಗಳು ಶ್ವೇತಾ ಅವರ ಪೀಳಿಗೆ, ಮೊಮ್ಮಗಳು ನವ್ಯಾ ಪೀಳಿಗೆ ವಿಭಿನ್ನವಾಗಿದೆ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!