ಬ್ರೇಕಿಂಗ್ ನ್ಯೂಸ್
Search

ಪರೋಕ್ಷವಾಗಿ ಕಂಗನಾಗೆ ಟಾಂಗ್ ಕೊಟ್ಟ ಜಯಾ ಬಚ್ಚನ್

292

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಬಾಲಿವುಡ್ ನಲ್ಲಿ ಡ್ರಗ್ಸ್ ದಂಧೆ ಕುರಿತು ಸಂಸದ ಹಾಗೂ ಭೋಜಪುರಿ ನಟ ರವಿ ಕಿಶನ್, ಸೋಮವಾರ ಶುರುವಾದ ಲೋಕಸಭೆ ಅಧಿವೇಶನದಲ್ಲಿ ಮಾತ್ನಾಡಿದ್ರು. ಅಲ್ದೇ, ನಟಿ ಕಂಗನಾ ರಣೌತ್ ಭರ್ಜರಿ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಹಿರಿಯ ನಟಿ, ರಾಜ್ಯಸಭೆ ಸದಸ್ಯೆ ಜಯಾ ಬಚ್ಚನ್, ಟಾಂಗ್ ಕೊಟ್ಟಿದ್ದಾರೆ.

ತುತ್ತು ನೀಡುತ್ತಿರುವ ಕೈಗಳನ್ನೇ ಕಚ್ಚುತ್ತಿದ್ದಾರೆ ಎಂದು ಜಯಾ ಬಚ್ಚನ್ ಹೇಳಿದ್ದಾರೆ. ಶೂನ್ಯ ವೇಳೆಯಲ್ಲಿ ಮಾತ್ನಾಡಿದ ಅವರು, ಯಾರ ಹೆಸರನ್ನ ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದ್ರು. ಸಾಮಾಜಿಕ ಮಾಧ್ಯಮಗಳಿಂದ ಮನರಂಜನಾ ಕ್ಷೇತ್ರ ಶಿಕ್ಷೆಗೆ ಗುರಿಯಾಗ್ತಿದೆ. ಸರ್ಕಾರ ರಕ್ಷಿಸಬೇಕಿದೆ ಎಂದರು.

ಬಾಲಿವುಡ್ ಕ್ಷೇತ್ರವನ್ನ ಚರಂಡಿ ಎಂದು ಕರೆದವರು, ಅದೇ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಇದಕ್ಕೆ ನನ್ನ ಸಂಪೂರ್ಣ ವಿರೋಧವಿದೆ ಎಂದರು. ಮನೋರಂಜನಾ ಕ್ಷೇತ್ರ ನೇರವಾಗಿ 5 ಲಕ್ಷ ಮಂದಿಗೆ ಪರೋಕ್ಷವಾಗಿ 50 ಲಕ್ಷ ಮಂದಿಗೆ ಉದ್ಯೋಗ ನೀಡಿದೆ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!