ಪ್ರಜಾಸ್ತ್ರ ಸಿನಿಮಾ ಡೆಸ್ಕ್
ರೋರಿಂಗ್ ಸ್ಟಾರ್ ಶ್ರೀಮುರುಳಿ ಹಾಗೂ ನಟಿ ಆಶಿಕಾ ರಂಗನಾಥ ಜೋಡಿಯ ಬಹುನಿರೀಕ್ಷಿತ ಮದಗಜ ಚಿತ್ರದ ಶೂಟಿಂಗ್ ಸೆಪ್ಟೆಂಬರ್ 19ರಿಂದ ಶುರುವಾಗ್ತಿದೆ. ಲಾಕ್ ಡೌನ್ ನಿಂದ ನಿಂತು ಹೋಗಿದ್ದ ಶೂಟಿಂಗ್ ಕಾರ್ಯ ಇದೀಗ ಮತ್ತೆ ಶುರುವಾಗ್ತಿದೆ.
ಮಹೇಶಕುಮಾರ ನಿರ್ದೇಶನ ಮಾಡ್ತಿರುವ ಚಿತ್ರಕ್ಕೆ ಉಮಾಪತಿ ಶ್ರೀನಿವಾಸಗೌಡ ಬಂಡವಾಳ ಹೂಡಿದ್ದಾರೆ. ರಾಬರ್ಟ್ ಚಿತ್ರಕ್ಕೂ ಇವರೇ ನಿರ್ಮಾಪಕರಾಗಿದ್ದು, ಮತ್ತೆ ಎರಡು ಬಿಗ್ ಬಿಜೆಟ್ ಸಿನಿಮಾಗಳನ್ನ ನೀಡಲು ರೆಡಿಯಾಗಿದ್ದಾರೆ. ಕೆಲ ತಿಂಗಳ ಬಳಿಕ ಮದಗಜ ಟೀಂ ಚಿತ್ರೀಕರಣಕ್ಕೆ ರೆಡಿಯಾಗ್ತಿದೆ.