ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ ಬಹುನಿರೀಕ್ಷಿತ ಚಿತ್ರ ಭರಾಟೆ ನಾಳೆ ರಿಲೀಸ್ ಆಗ್ತಿದೆ. ರಿಲೀಸ್ ಗೂ ಮೊದ್ಲೇ ಭರ್ಜರಿ ಹವಾ ಕ್ರಿಯೇಟ್ ಮಾಡಿರುವ ಚಿತ್ರ, ನಟ ಶ್ರೀಮುರುಳಿ ಫ್ಯಾನ್ಸ್ ಗಳಿಗೆ ಫುಲ್ ಕಿಕ್ ಕೊಡಲು ರೆಡಿಯಾಗಿದೆ.
ಭರ್ಜರಿ, ಬಹದ್ದೂರ್ ಅನ್ನೋ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ ಚೇತನಕುಮಾರ ಆಕ್ಷನ್ ಕಟ್ ಹೇಳಿದ 3ನೇ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಮೂವರು ಸಹೋದರರು ಒಟ್ಟಿಗೆ ಒಂದೇ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ, ಆರ್ಮುಗಂ ಖ್ಯಾತಿಯ ರವಿಶಂಕರ ಹಾಗೂ ವಾನರ ಖ್ಯಾತಿಯ ಅಯ್ಯಪ್ಪ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಉ್ರಗಂ ಬಳಿಕ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಸಿನ್ಮಾ ಎಂದು ನಟ ಶ್ರೀಮುರುಳಿ ಹೇಳಿದ್ದಾರೆ. ನಟಿ ಶ್ರೀಲೀಲಾ ರೋರಿಂಗ್ ಸ್ಟಾರ್ ಗೆ ಜೋಡಿಯಾಗಿದ್ದಾಳೆ. ನಟಿ ರಚಿತಾ ರಾಮ ಗೆಸ್ಟ್ ರೋಲಿನಲ್ಲಿ ಕಾಣಿಸಿಕೊಂಡಿದ್ದಾಳೆ. ನಟಿ ತಾರಾ ಸೇರಿದಂತೆ ಬಹುದೊಡ್ಡ ತಾರಾ ಬಳಗ ಚಿತ್ರದಲ್ಲಿ ನಾಳೆಯಿಂದ ಭರಾಟೆಯ ಅಬ್ಬರ ಶುರುವಾಗಲಿದೆ.