2.3 ಅಡಿ ಎತ್ತರದ ವರನಿಗೆ ಕಡೆಗೂ ಸಿಕ್ಕ ವಧು

275

ಪ್ರಜಾಸ್ತ್ರ ಸುದ್ದಿ

ಶಾಮ್ಲಿ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ನಿವಾಸಿ ಅಜೀಂ ಮನ್ಸೂರಿಗೆ ಕಡೆಗೂ ವಧು ಸಿಕ್ಕಿದ್ದಾಳೆ. ನವೆಂಬರ್ 7ರಂದು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಅಜೀಂ ಮನ್ಸೂರಿಗೆ ಸಮಸ್ಯೆಯಾಗಿದ್ದೇ ಆತನ ಎತ್ತರ. ಹೌದು, ಕೇವಲ 2.3 ಅಡಿ ಎತ್ತರದ ಅಜೀಂ ಸರ್ಕಾರಿ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಸಹ ಭೇಟಿಯಾಗಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು.

ಇದೀಗ ಹಾಪೂರ್ ನ 3 ಅಡಿ ಎತ್ತದ ಬುಶಾರಾ ಜೊತೆಗೆ ಅಜೀಂ ಮದುವೆ ನವೆಂಬರ್ 7ಕ್ಕೆ ನಡೆಯಲಿದೆ. 2021ರಲ್ಲಿ ಬುಶಾರಾ ಹಾಗೂ ಅಜೀಂ ನಿಶ್ಚಿತಾರ್ಥ ನಡೆದಿದೆ. ಪದವಿ ಮುಗಿಸಿದ ಬಳಿಕ ತಾನು ಮದುವೆಯಾಗುವುದಾಗಿ ಯುವತಿ ಹೇಳಿದ್ದರಿಂದ, ಈಗ ಮದುವೆ ನಡೆಯುತ್ತಿದೆ.

ಅಜೀಂ ಮನ್ಸೂರಿ ಸೌಂದರ್ಯವರ್ದಕ ಅಂಗಡಿ ನಡೆಸುತ್ತಿದ್ದಾರೆ. 6 ಜನ ಮಕ್ಕಳಲ್ಲಿ ಇವರು ಚಿಕ್ಕವರು. ಶಾಲೆಯಲ್ಲಿ ಇವರಿಗೆ ಅವಮಾನ, ಅಪಹಾಸ್ಯ ಮಾಡಿದ್ದರಿಂದ 5ನೇ ತರಗತಿಯಿಂದಲೇ ಓದುವುದನ್ನು ನಿಲ್ಲಿಸಿ ಅಂಗಡಿಯಲ್ಲಿ ಕೆಲಸ ಮಾಡಲು ಶುರು ಮಾಡಿದರು.




Leave a Reply

Your email address will not be published. Required fields are marked *

error: Content is protected !!