ಫೇಸ್ ಬುಕ್ ಮೂಲಕ 47 ಲಕ್ಷ ರೂಪಾಯಿ ಕಳೆದುಕೊಂಡ ಶಿಕ್ಷಕಿ

323

ಪ್ರಜಾಸ್ತ್ರ ಸುದ್ದಿ

ಶಿವಮೊಗ್ಗ: ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರಿಂದ ಖಾಸಗಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಬರೋಬ್ಬರಿ 47 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಸಂಬಂಧ ಇದೀಗ ಶಿವಮೊಗ್ಗ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೈಡಾ ಎಂಬುವರು, ಶಾಲೆ ನಡೆಸಲು ದಾನಿಗಳಿಂದ ಅನುದಾನ ಬೇಕಿದೆ. ಸಹಾಯ ಮಾಡಿ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ರು. ಇದನ್ನ ನೋಡಿದ ಮಾರ್ಕ್ ಡೊನಾಲ್ಡ್ ಅನ್ನೋ ವ್ಯಕ್ತಿ ಇವರನ್ನ ಸಹಾಯ ಮಾಡುವುದಾಗಿ ನಂಬಿಸಿದ್ದಾನೆ. ಅವನ ಮಾತನ್ನ ಇವರು ನಂಬಿದ್ದಾರೆ. ವಿದೇಶಿ ಕರೆನ್ಸಿ ಭಾರತದ ರೂಪಾಯಿಗೆ ವರ್ಗಾಯಿಸಲು ಹಣ ನೀಡಬೇಕಾಗುತ್ತೆ ಎಂದು ಹೇಳಿ ಕಳೆದ 3 ತಿಂಗಳಿಂದ ಶಿಕ್ಷಕಿಯಿಂದ ಹಣ ಜಮಾ ಮಾಡಿಸಿಕೊಂಡಿದ್ದಾನೆ.

ಹಂತ ಹಂತವಾಗಿ 3 ತಿಂಗಳಿನಿಂದ ಮಾರ್ಕ್ ಡೊನಾಲ್ಡ್ ಅನ್ನೋ ವ್ಯಕ್ತಿ ಬರೋಬ್ಬರಿ 47.84 ಲಕ್ಷ ರೂಪಾಯಿ ಜಮಾ ಮಾಡಿಸಿಕೊಂಡಿದ್ದಾನೆ. ಇಷ್ಟೆಲ್ಲ ಆದ್ಮೇಲೂ ಇವರಿಗೆ ಹಣ ಬಂದಿಲ್ಲ. ಆಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಹೀಗಾಗಿ ಇದೀಗ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!