ಪ್ರಜಾಸ್ತ್ರ ಸುದ್ದಿ
ವಿಜಯಪುರ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಜಿಲ್ಲೆಯ ಇಂಡಿ ತಾಲ್ಲೂಕಿನ ರೂಗಿ-ಅಥರ್ಗಾ ಮಾರ್ಗದ ಪೀರಾಪುರ ದರ್ಗಾ ಹತ್ತಿರ ಬಂಧಿಸಲಾಗಿದೆ.
ಅಬಕಾರಿ ಪೊಲೀಸರು ದಾಳಿಗೈದು 40 ಸಾವಿರ ಮೌಲ್ಯದ 950 ಕೆಜಿ ಗಾಂಜಾ ಜಪ್ತಿ ಮಾಡಿದ್ದು, ಸೋಮನಿಂಗ ಅಣ್ಣಪ್ಪ ಗುಡಿ ಬಂಧಿಸಲಾಗಿದೆ.
ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ವಿಜಯಪುರ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.