ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ಪ್ರಭಾಸ್ ನಟನೆಯ ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದನ್ನು ನೋಡಿದ ಪ್ರೇಕ್ಷಕರು ಭರ್ಜರಿಯಾಗಿ ಟ್ರೋಲ್ ಮಾಡುತ್ತಿದ್ದಾರೆ. ಇಷ್ಟು ದಿನ ಪ್ರಭಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ, ಟೀಸರ್ ರಿಲೀಸ್ ಬಳಿಕ ಅವರ ಆಸೆಗೆ ತಣ್ಣೀರು ಎರೆಚಿದೆಯಂತೆ.
ಹೌದು, ಆದಿಪುರುಷ ಚಿತ್ರದ ಟೀಸರ್ ನೋಡಿದವರು ಇದೊಂದು ಕಾರ್ಟೂನ್ ರೀತಿ ಇದೆ. ಇದಕ್ಕಿಂತ ಜಪಾನಿ ರಾಮಾಯಣ ಚಿತ್ರ ನೋಡುವುದು ಉತ್ತಮ ಎಂದಿದ್ದಾರೆ. ಮತ್ತೆ ಕೆಲವರು ಈ ಚಿತ್ರ ಪೋಗೋ ಚಾನಲ್ ಗೆ ಸ್ಯಾಟ್ ಲೈಟ್ ಮಾರಾಟವಾಗಿದೆ ಎನ್ನುವ ಮೂಲಕ ಕಾರ್ಟೂನ್ ಚಿತ್ರವೆಂದು ಹೇಳಿದ್ದಾರೆ. ಮತ್ತೊಬ್ಬರು 700 ಕೋಟಿ ಬಜೆಟ್ ನ ಟೆಂಪಲ್ ರನ್ ಗೇಮ್ ಎಂದು ಕಾಲೆಳೆದಿದ್ದಾರೆ.
ಪ್ರಭಾಸ್, ಸೈಫ್ ಅಲಿ ಖಾನ್, ಕೀರ್ತಿ ಸನೂನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮರಾಠಿ, ಹಿಂದಿ ಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದ ಓಂ ರಾವತ್ ಇದೆ ಮೊದಲ ಬಾರಿಗೆ ಸೌಥ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಆರಂಭದಲ್ಲಿ ಟ್ರೋಲ್ ಶುರುವಾಗಿದೆ. ಇನ್ನು ಬಾಹುಬಲಿ ಬಳಿಕ ಪ್ರಭಾಸ್ ನಟನೆಯ ಸಾಹೋ, ರಾಧೆ ಶ್ಯಾಮ್ ಚಿತ್ರಗಳು ನೆಲಕಚ್ಚಿವೆ. ಈಗ ಆದಿಪುರುಷ ಚಿತ್ರಕ್ಕೂ ಕಾಟ ಶುರುವಾಗಿದೆ.