ಸಲಾರ್ ಚಿತ್ರಕ್ಕೆ ಎ ಸರ್ಟಿಫಿಕೇಟ್

203

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಸಾಲರ್ ಸಿನಿಮಾ ಇದೇ ತಿಂಗಳು 22ಕ್ಕೆ ರಿಲೀಸ್ ಆಗುತ್ತಿದೆ. ಈ ಮೂಲಕ ನಟ ಪ್ರಭಾಸ್ 2023ಕ್ಕೆ ವಿದಾಯ ಹೇಳುತ್ತಿದ್ದಾರೆ. ಆದರೆ, ಈ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಲಾಗಿದ್ದು, 18 ವರ್ಷಕ್ಕಿಂತ ಕೆಳಗಿನ ಮಕ್ಕಳು ಥಿಯೇಟರ್ ಗೆ ಸಿನಿಮಾ ನೋಡಲು ಬರುವಂತಿಲ್ಲ.

ಅತಿಯಾದ ಹೊಡೆದಾಟ, ಕ್ರೌರ್ಯ ತುಂಬಿಕೊಂಡಿರುವ ದೃಶ್ಯಗಳಿರುವುದರಿಂದ ಎ ಸರ್ಟಿಫಿಕೇಟ್ ನೀಡಲಾಗಿದೆ. ಹೀಗಾಗಿ ಈ ಮೂವಿ ಟಿವಿನಲ್ಲಿ ಪ್ರಸಾರ ಮಾಡಲು ಬರುವುದಿಲ್ಲ. ಒಂದು ವೇಳೆ ಬಂದರೂ ಅಚ್ಚರಿ ಪಡಬೇಕಿಲ್ಲ. ನಟ ಪ್ರಭಾಸಗೆ ಜೋಡಿಯಾಗಿ ನಟಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ದೇವರಾಜ್, ಜಗತಿ ಬಾಬು, ಪ್ರಮೋದ್, ಈಶ್ವರಿರಾವ್, ಗರುಡ ರಾಮ್ ಸೇರಿ ದೊಡ್ಡ ತಾರಾ ಬಳಗವಿದೆ.

ಸಲಾರ್ ಚಿತ್ರದಿಂದ ಇದುವರೆಗೂ ಒಂದೂ ಹಾಡು ರಿಲೀಸ್ ಆಗಿಲ್ಲ. ಬಿಟ್ಟಿರುವ ಟ್ರೇಲರ್ ಸಹ ಪ್ರಭಾಸ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ಉಗ್ರಂ, ಕೆಜಿಎಫ್ ಸಿನಿಮಾ ಮಿಕ್ಸ್ ಮಾಡಿ ಸಲಾರ್ ಮಾಡಿದ್ದಾರೆ ಎಂದು ಟ್ರೇಲ್ ಮಾಡಲಾಗಿದೆ. ಡಿಸೆಂಬರ್ 16ಕ್ಕೆ ಮತ್ತೊಂದು ಆಕ್ಷನ್ ಪ್ಯಾಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸುವ ಕೆಲಸವಾಗುತ್ತಿದೆ. ಬಾಹುಬಲಿ ಚಿತ್ರದ ಬಳಿಕ ಪ್ರಭಾಸ್ ನಟನೆಯ ಯಾವ ಚಿತ್ರಗಳು ಯಶಸ್ಸು ಕಂಡಿಲ್ಲ. ಹೀಗಾಗಿ ಸಲಾರ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.




Leave a Reply

Your email address will not be published. Required fields are marked *

error: Content is protected !!