ರೆಬಲ್ ಅಭಿಮಾನಿಗಳಿಗೆ ಸಲಾರ್ ಟೀಸರ್ ಕಿಕ್

192

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳಿಗೆ ಫುಲ್ ಕಿಕ್ ನೀಡುತ್ತಿದೆ. ಉಗ್ರಂ, ಕೆಜಿಎಫ್ ಅನ್ನೋ ಬ್ಲಾಕ್ ಬ್ಲಸ್ಟರ್ ಚಿತ್ರಗಳನ್ನು ನೀಡಿದ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಸಲಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಎಂದಿನಂತೆ ಪ್ರಶಾಂತ್ ನೀಲ್ ತಮ್ಮ ಕಪ್ಪು ಬಿಳುಪಿನ ಶೈಲಿನ ಚಿತ್ರದ ಸಾಲಿಗೆ ಸಲಾರ್ ಸಹ ಸೇರಿಕೊಂಡಿದ್ದು, ಮತ್ತೊಂದು ಹೊಸ ಲೋಕ ಅನಾವರಣಗೊಳಿಸಲು ರೆಡಿಯಾಗಿದ್ದಾರೆ. ಬಾಹುಬಲಿ ನಂತರ ಸಕ್ಸಸ್ ಟ್ರ್ಯಾಕ್ ಗೆ ಮರಳು ಆಗದ ನಟ ಪ್ರಭಾಸ್ ಗೆ ಈ ಚಿತ್ರ ಮತ್ತೊಂದು ಮೈಲುಗಲ್ಲು ಆಗಲಿದೆ ಅಂತಾ ಹೇಳಲಾಗುತ್ತಿದೆ.

ಹಿರಿಯ ನಟ ಟಿನು ಆನಂದ್ ಕಥೆಯ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ನಂತರ ಪ್ರಭಾಸ್ ಲುಕ್, ಆನಂತರ ಪೃಥ್ವಿರಾಜ್ ಸುಕಮಾರ್ ಲುಕ್ ರಿವೀಲ್ ಆಗುತ್ತೆ. ಗುರುವಾರ ನಸುಕಿನ ಜಾವ 5.12ಕ್ಕೆ ಟೀಸರ್ ರಿಲೀಸ್ ಮಾಡಲಾಗಿದೆ. ಶೃತಿ ಹಾಸನ್ ಪ್ರಭಾಸ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಬಿಗ್ ಬಜೆಟ್ ಚಿತ್ರಗಳ ಮೂಲಕ ಸೂಪರ್ ಹಿಟ್ ಸಿನಿಮಾಗಳನ್ನೇ ನೀಡುತ್ತಿರುವ ಕನ್ನಡದ ಹೊಂಬಾಳೆ ಸಂಸ್ಥೆ ಸಲಾರ್ ಮೂವಿ ನಿರ್ಮಾಣ ಮಾಡುತ್ತಿದ್ದು, ಮತ್ತೊಂದು ದಾಖಲೆ ಬರೆಯಲು ಸಿದ್ಧವಾಗಿದೆ.




Leave a Reply

Your email address will not be published. Required fields are marked *

error: Content is protected !!