ನವದೆಹಲಿ: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ನಾಯಕ ಜೆಪಿ ನಡ್ಡಾ ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಗೃಹ ಸಚಿವ ಹಾಗೂ ನಿಕಟಪೂರ್ವ ಅಧ್ಯಕ್ಷ ಅಮಿತ ಶಾ ಅಧಿಕಾರ ಹಸ್ತಾಂತರಿಸಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿಯೇ ಅಮಿತ ಶಾ ಅವರ ಅಧಿಕಾರದ ಅವಧಿ ಮುಗಿದಿತ್ತು. ಆದ್ರೆ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಷ್ಟ್ರಗಳ ಎಲೆಕ್ಷನ್ ಹಿನ್ನೆಯಲ್ಲಿ ಶಾ ಅವರನ್ನ ಮುಂದುವರೆಸಲಾಗಿತ್ತು. ಇವತ್ತು ಜೆಪಿ ನಡ್ಡಾ ಬಿಜೆಪಿ ನೂತನ ಸಾರಥಿಯಾಗಿದ್ದಾರೆ.
ಹಿಮಾಚಲ ಪ್ರದೇಶ ಮೂಲದವರಾದ ಜೆಪಿ ನಡ್ಡಾ ಆರ್ ಎಸ್ಎಸ್ ಪಾರಿವಾರದಿಂದ ಬಂದವರು. ಈ ಹಿಂದಿನ ಅಧ್ಯಕ್ಷರಾದ ನಿತಿನ ಗಡ್ಕರಿ, ಅಮಿತ ಶಾ ಅವರಂತೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡದೆ ಇದ್ರೂ ನಡ್ಡಾ ಬಿಜೆಪಿಯ ಮಾಸ್ಟರ್ ಬ್ರೈನ್ ಆಗಿದ್ರು. ತೆರೆಮರೆಯಲ್ಲಿ ಇವರ ಮಾಡಿದ ಪ್ಲಾನ್ ಗಳು ಸಾಕಷ್ಟು ಸಕ್ಸಸ್ ಆಗಿವೆ. ಹೀಗಾಗಿ ಬಿಜೆಪಿ ಕೋಟೆಯ ಜವಾಬ್ದಾರಿಯನ್ನ ನಡ್ಡಾ ಹೆಗಲಿಗೆ ಹೊರಸಲಾಗಿದೆ.