ಎಸಿಬಿ ಅಧಿಕಾರಿಗಳ ದಾಳಿ

217

ಪ್ರಜಾಸ್ತ್ರ ಸುದ್ದಿ

ನಿಡಗುಂದಿ: ಸಂತ್ರಸ್ಥರಿಗೆ ಮಂಜೂರಾದ ನಿವೇಶನಗಳನ್ನು ಹಣ ಪಡೆದು ಹಂಚಿಕೆ ಮಾಡಿದ ಆರೋಪ ಕೇಳಿ ಬಂದಿದೆ. ಹೀಗಾಗಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಪುನರ್ವಸತಿ ಹಾಗೂ ಪುನರ್ನಿರ್ಮಾಣ ಇಲಾಖೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ರು.

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಆಲಮಟ್ಟಿ ಹಿನ್ನೀರಿನಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಹಂಚಿಕೆಯಾದ ನಿವೇಶಗಳನ್ನ, ನೀಡಲು ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ದೇ, ಹಣ ಇದ್ದವರಿಗೆ ನಿವೇಶನ ಹಂಚಿಕೆ ಮಾಡುತ್ತಿದ್ದ, ಮೂಲ ಹೆಸರು ಇರುವುದನ್ನ ಇಲ್ಲದಂತೆ ಮಾಡುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪುನರ್ವಸತಿ ಕೇಂದ್ರಗಳಲ್ಲಿ 30 ದಶಕಗಳ ಹಿಂದೆ ನಿವೇಶನ ಪಡೆದಿರುವ ಮೂಲ ಸಂತ್ರಸ್ಥರಲ್ಲಿ ಕೆಲವರು ಮನೆಗಳನ್ನು ನಿರ್ಮಿಸಿಕೊಳ್ಳದೇ ಖಾಲಿ ನಿವೇಶನಗಳನ್ನು ಹಾಗೆಯೇ ಬಿಟ್ಟಿದ್ದಾರೆ. ರಜಿಸ್ಟರ್‌ಗಳಲ್ಲಿ ವೈಟ್ನರ್ ಮತ್ತು ಮಸಿ ಬಳಸಿ ಮೂಲ ಸಂತ್ರಸ್ಥರ ಹೆಸರುಗಳನ್ನು ಅಳಿಸಲಾಗಿದೆ ಎಂದು ಸಂತ್ರಸ್ಥರು ನೀಡಿದ ದೂರಿನ ಮೇರೆಗೆ, ಎಸಿಬಿ ಬೆಳಗಾವಿ ಎಸ್ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಡಿವೈಎಸ್ಪಿಗಳಾದ ದಾಳಿ ನಡೆಸಿ, ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!