ಭೀಮಾ ತೀರದ ಹಂತಕನ ಪತ್ನಿ ಸಾವು

545

ಚಡಚಣ: ಭೀಮಾ ತೀರದ ಹಂತಕ ಭಾಗಪ್ಪ ಹರಿಜನ ಪತ್ನಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಶೋಭಾ ಎಂಬುವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕಪನಿಂಬರಗಿ ಬಳಿಯ ಎನ್ ಹೆಚ್ 13ರ ಹತ್ತಿರ ಕಾರು ಮತ್ತು ಗೂಡ್ಸ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಸಾವನ್ನಪ್ಪಿದ್ದಾರೆ.ಕಾರು ಮತ್ತು ಗೂಡ್ಸ್ ವಾಹನ ಚಾಲಕರಿಬ್ಬರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಹೊರ್ತಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





Leave a Reply

Your email address will not be published. Required fields are marked *

error: Content is protected !!