ಮದುವೆ ಮನೆಯಿಂದ ಹೊರಟವರು ಮಸಣ ಸೇರಿದ್ರು

357

ಬ್ರೇಕಿಂಗ್ ನ್ಯೂಸ್:

ಜಲಗಾಂವ್: ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ.. ಮದುವೆಗೋ ಮಸಣಕೋ ಅಂತಾ ಡಿವಿಜಿ ಅವರ ಕವಿತೆ ಸಾಲುಗಳು ಅಕ್ಷರಶಃ ಇಲ್ಲಿ ನಿಜವಾಗಿದೆ. ಮದುವೆ ಮುಗಿಸಿಕೊಂಡು ವಾಪಸ್ ಆಗ್ತಿದ್ದವರು ಸೀದಾ ಮಸಣ ಸೇರಿದ್ದಾರೆ. ರಸ್ತೆ ಅಪಾಘದಲ್ಲಿ 10 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದ ಜಲಗಾಂವ್ ನ  ಚಿಂಚೋಳಿಯಲ್ಲಿ ನಡೆದಿದೆ.

ಮದುವೆ ಮುಗಿಸಿಕೊಂಡು ಬರ್ತಿದ್ದ ಕ್ರೂಸರ್ ಹಾಗು ಡಂಪರ್ ನಡುವೆ ಮುಕ್ತಿನಗರದ ಬಳಿ ಅಪಘಾತ ಸಂಭವಿಸಿ 10 ಜನ ಪ್ರಾಣ ಕಳೆದುಕೊಂಡಿದ್ದು 7 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಭೂಸವಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!