ಕೇಜ್ರಿ ಮತ್ತೆ ದಿಲ್ಲಿ ಸುಲ್ತಾನ್ ಆಗಲು ಈ 5 ಕೆಲಸಗಳು ಸಾಕಂತೆ!

458

ಪ್ರಜಾಸ್ತ್ರ ವಿಶೇಷ ಲೇಖನ:

ರಾಷ್ಟ್ರರಾಜ್ಯಧಾನಿಯಲ್ಲಿ ಇದೀಗ ಚುನಾವಣೆಯ ಕಾವು ಜೋರಾಗಿದೆ. ಕೇಂದ್ರಾಡಳಿತ ಪ್ರದೇಶದ ಯಾವ ಭಾಗಕ್ಕೆ ಹೋದ್ರೂ ಪ್ರತಿಯೊಬ್ಬರ ಬಾಯಿಯಲ್ಲಿ ಬರ್ತಿರುವುದು ದಿಲ್ಲಿ ಎಲೆಕ್ಷನ್ ಮಾತು. ಇದರ ಜೊತೆಗೆ ಇಲ್ಲಿನ ಜನರೆ ಹೇಳುವಂತೆ ಮತ್ತೆ ದೆಹಲಿ ಸುಲ್ತಾನ್ ಆಗುವುದು ಸಿಎಂ ಅರವಿಂದ ಕೇಜ್ರವಾಲ್.

ಜನ ಲೋಕ್ ಪಾಲ್ ಬಿಲ್ ಹೋರಾಟದಿಂದ ಅರವಿಂದ ಕೇಜ್ರಿವಾಲ್ ಮುನ್ನೆಲೆಗೆ ಬಂದ್ರು. ಬಳಿಕ 2013ರಿಂದ ರಾಜಕೀಯ ಅಖಾಡಕ್ಕೆ ಧುಮಿಕಿ ಸಕ್ಸಸ್ ಕಂಡ್ರು. 2014ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಾರ್ಟಿ 70 ವಿಧಾನಸಭಾ ಕ್ಷೇತ್ರಗಳಲ್ಲಿ 67 ಕ್ಷೇತ್ರಗಳನ್ನ ತನ್ನ ಜೋಳಿಗೆಗೆ ಹಾಕಿಕೊಂಡು ಕಾಂಗ್ರೆಸ್, ಬಿಜೆಪಿಯನ್ನ ಗುಡಿಸಿ ಹಾಕಿತು.

ಹೀಗೆ ಸಿಎಂ ಗದ್ದುಗೆ ಏರಿದ ಕೇಜ್ರಿವಾಲ್ ಆರಂಭದಲ್ಲಿ ಅತಿ ಹೆಚ್ಚು ಮಾತುಗಳಿಂದಲೇ ಸುದ್ದಿಯಾದ್ರು. ಸದಾ ಸ್ವೆಟರ್ ಹಾಗೂ ಮಪ್ಪಲರ್ ತೊಟ್ಟು ಕಾಣಿಸಿಕೊಳ್ತಿದ್ದ ಕೇಜ್ರಿವಾಲ್ ಸಾಕಷ್ಟು ಟೀಕೆಗಳಿಗೂ ಗುರಿಯಾದ್ರು. ಸಿಎಂ ಆಗಿ ಬೀದಿಗೆ ಬಂದು ಪ್ರತಿಭಟನೆ ನಡೆಸಿದ್ರು. ಲೆಫ್ಟಿನೆಂಟ್ ಗವರ್ನರ್ ಜೊತೆ ಫೈಟ್ ಆಯ್ತು. ಹೀಗೆ ಸದಾ ಒಂದಲ್ಲ ಒಂದು ಗುದ್ದಾಟ, ಪ್ರತಿಭಟನೆ, ಮಾತಿಗೆ ಮಾತು ಅನ್ನೋ ರೀತಿಯಲ್ಲಿ ಹೊರಟಿದ್ದ ಕೇಜ್ರಿವಾಲ್ ಸಡನ್ ಆಗಿ ಸೈಲೆಂಟ್ ಆದ್ರು.

ಮಾತಿಗಿಂತ ಕೃತಿ ಮುಖ್ಯವೆಂದು ಅರಿತ ಸಿಎಂ ಕೇಜ್ರಿವಾಲ್ ದೆಹಲಿಯಲ್ಲಿ ಹಲವು ಸುಧಾರಣೆಗಳನ್ನ ತಂದ್ರು. ಕೇಂದ್ರಾಡಳಿತ ಪ್ರದೇಶವಾಗಿರುವುದ್ರಿಂದ ಕೇಂದ್ರ ಕ್ಯಾಬಿನೆಟ್ ಮಂತ್ರಿಮಂಡಲ, ಲೆಫ್ಟಿನಂಟ್ ಗವರ್ನರ್, ನಂತರ ಸಿಎಂ ಆಟ ನಡೆಯೋದು. ಹೀಗಿರುವ ದೆಹಲಿಯ ಜನತೆಗೆ ಸಿಎಂ ಒಂದೊಂದೆ ಅನುಕೂಲ ನೀಡುತ್ತಾ ಹೋದ್ರು. ಕೇಜ್ರಿಯ ಐದು ಪ್ರಮುಖ ಕೆಲಸಗಳು ಈ ಬಾರಿ ಮತ್ತೆ ಕೈ ಹಿಡಿಯುತ್ತೆ ಅಂತಿದೆ ಸಮೀಕ್ಷೆ.

1. ರಸ್ತೆ ಸುಧಾರಣೆ

ರಾಷ್ಟ್ರರಾಜ್ಯಧಾನಿಯಾಗಿದ್ರೂ ದೆಹಲಿಯ ಅನೇಕ ರಸ್ತೆಗಳು ಸುಧಾರಣೆ ಕಂಡಿರ್ಲಿಲ್ಲ. ಸತತ ಮೂರು ಬಾರಿ ದೆಹಲಿ ಸಿಎಂ ಆಗಿದ್ದ ಕಾಂಗ್ರೆಸ್ ನ ಶೀಲಾ ದೀಕ್ಷಿತ್ ಅವರಿಂದ ಇಲ್ಲಿನ ಜನತೆಗೆ ಹೆಚ್ಚು ಲಾಭವಾಗ್ಲಿಲ್ಲ. ಈ ಬಗ್ಗೆ ಗಮನ ಹರಿಸಿದ ಕೇಜ್ರಿವಾಲ್ ಇಲ್ಲಿನ ರಸ್ತೆಗಳನ್ನ ಸುಧಾರಣೆ ಮಾಡಿದ್ರು. ಎಷ್ಟು ಸಾಧ್ಯವೋ ಅಷ್ಟು ಉತ್ತಮ ರಸ್ತೆಗಳನ್ನ ನಿರ್ಮಿಸುವ ಕೆಲಸ ಮಾಡಿದ್ರು.

2. ನೀರು ಪೂರೈಕೆ

ಮೆಟ್ರೋ ಪಾಲಿಟಿಯನ್ ಸಿಟಿಯಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಒಮ್ಮೆ ನೀರು ಬಂದ್ರೆ ವಾರ, ಹದಿನೈದು ದಿನಕ್ಕೊಮ್ಮೆ ಬರುವ ಪರಿಸ್ಥಿತಿಯಿದ್ದ ಟೈಂನಲ್ಲಿ ಟೈಂ ಟೈಂಗೆ ನೀರು ಪೂರೈಕೆ ಮಾಡಲು ಶುರು ಮಾಡಿದ್ರು. ದೆಹಲಿಯಲ್ಲಿರುವ ಸ್ಲಂಗಳಿಗೂ ಭರ್ಜರಿಯಾಗಿ ನೀರು ಪೂರೈಕೆ ಮಾಡಿದ್ರು. ಹೀಗಾಗಿ ತಿಂಗಳಿಗೆ 20 ಸಾವಿರ ಲೀಟರ್ ನೀರು ಸ್ಲಂಗಳಿಗೆ ಹರಿಯಿತು. ಇದ್ರಿಂದಾಗಿ ಇಲ್ಲಿನ ಜನರ ಜಲದಾಹ ತೀರಿತು.

3. ಉಚಿತ ವಿದ್ಯುತ್ ಪೂರೈಕೆ

ಸಿಎಂ ಅರವಿಂದ ಕೇಜ್ರಿವಾಲ್ ದೆಹಲಿ ನಿವಾಸಿಗಳಿಗೆ ಪ್ರತಿ ತಿಂಗಳು 210 ಯೂನಿಟ್ ವಿದ್ಯುತ್ ಫ್ರೀಯಾಗಿ ನೀಡಲು ಶುರು ಮಾಡಿದ್ದಾರೆ. ಹೀಗಾಗಿ ಕಳೆದ 7 ತಿಂಗಳಿನಿಂದ ಇಲ್ಲಿನ ಪ್ರತಿ ಮನೆಯಲ್ಲಿ 10 ರಿಂದ 20 ರೂಪಾಯಿ ಬಿಲ್ ಬರ್ತಿದೆ. ಬಡ, ಮಧ್ಯಮ ವರ್ಗದ ಜನರಿಗೆ ಇದು ಎಷ್ಟೊಂದು ಉಳಿತಾಯ ಅನ್ನೋದು ಅವರಿಗೆ ಮಾತ್ರ ಗೊತ್ತು.

4. ಖಾಸಗಿ ಶಾಲೆಗಳಂತೆ ಹೈಟೆಕ್ ಸರ್ಕಾರಿ ಶಾಲೆಗಳು

ಇವತ್ತಿನ ದಿನದಲ್ಲಿ ಕೂಲಿ ಮಾಡಿ ಬದುಕುವ ಕುಟುಂಬವೂ ತನ್ನ ಮಕ್ಕಳನ್ನ ಖಾಸಗಿ ಶಾಲೆ ಸೇರಿಸ್ತಿದೆ. ಅದಕ್ಕಾಗಿ ಲಕ್ಷ ಲಕ್ಷ ಸಾಲ ಮಾಡಿ ಜೀವನಪೂರ್ತಿ ಕಷ್ಟಪಡಬೇಕಿದೆ. ಆದ್ರೆ, ದೆಹಲಿಯಲ್ಲಿನ ಸರ್ಕಾರಿ ಶಾಲೆಗಳನ್ನ ಖಾಸಗಿ ಶಾಲೆ ಮಾದರಿಯಲ್ಲಿ ರೆಡಿ ಮಾಡಲಾಯ್ತು. ಖಾಸಗಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳು ಸರ್ಕಾರಿ ಶಾಲೆ ಮಕ್ಕಳಿಗೆ ಸಿಗುವಂತೆ ಮಾಡಿದ್ರು. ಇಲ್ಲಿ ಪಾಠ ಮಾಡುವ ಶಿಕ್ಷಕರನ್ನ ಹಲವು ಹಂತಗಳಲ್ಲಿ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗ್ತಿದೆ. ಈ ಮೂಲಕ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲಾಗ್ತಿದೆ.

5. ಹೆಣ್ಮಕ್ಕಳಿಗೆ ಉಚಿತ ಸಾರಿಗೆ ಸೇವೆ

ಇದು ಬಹುಶಃ ದೇಶದಲ್ಲಿಯೇ ಮೊದಲು ಇರಬೇಕು. ದೆಹಲಿಯಲ್ಲಿನ ಸಾರ್ವಜನಿಕ ಸಾರಿಗೆಯಲ್ಲಿ ಹೆಣ್ಮಕ್ಕಳಿಗೆ ಸಂಪೂರ್ಣ ಉಚಿತ ಸೇವೆ ನೀಡಲಾಗ್ತಿದೆ. ಯಾವುದೇ ವಯಸ್ಸಿನ ಮಿತಿಯಿಲ್ಲ. ಸರ್ಕಾರದ ಯಾವುದೇ ಬಸ್ ಗೆ ಹತ್ತಿದ್ರೂ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣ. ಇದಕ್ಕಾಗಿ ಅವರಿಗೆ ಪಿಂಕ್ ಟಿಕೆಟ್ ನೀಡಲಾಗ್ತಿದೆ. ಹೀಗಾಗಿ ಅದೆಷ್ಟೋ ಹೆಣ್ಮಕ್ಕಳಿಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಉಳಿತಾಯವಾಗ್ತಿದೆ. ಇದರ ಜೊತೆಗೆ ಹೆಣ್ಮಕ್ಕಳ ಸುರಕ್ಷತೆಗೂ ಹೆಚ್ಚು ಒತ್ತು ನೀಡಲಾಗ್ತಿದೆ.

ಹೀಗೆ ಬಡ ಹಾಗೂ ಮಧ್ಯಮ ವರ್ಗದ ಜನಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನ ನೀಡಿದಾಗ ಜನ ಖಂಡಿತ ಖುಷಿಯಾಗಿರ್ತಾರೆ. ಇದೆಲ್ಲವನ್ನ ದೃಷ್ಟಿಯಲ್ಲಿಟ್ಟಿಕೊಂಡಿರುವ ದೆಹಲಿ ಮತದಾರ ಮತ್ತೊಮ್ಮೆ ಕೇಜ್ರಿವಾಲ್ ಸರ್ಕಾರ ತರಲು ಮನಸ್ಸು ಮಾಡಿದ್ದಾರೆ ಅಂತಾ ಹೇಳಲಾಗ್ತಿದೆ. 70ರಲ್ಲಿ 60 ಪ್ಲಸ್ ಸೀಟ್ ಆಪ್ ಗೆಲ್ಲಲಿದೆಯಂತೆ.




Leave a Reply

Your email address will not be published. Required fields are marked *

error: Content is protected !!