ಮತ್ತೆ ಕೇಜ್ರಿ ದಿಲ್ಲಿ ಸುಲ್ತಾನ್: ಫೆ.14ಕ್ಕೆ ಪದಗ್ರಹಣ

391

ನವದೆಹಲಿ: ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಪ್ ಮತ್ತೊಮ್ಮೆ ಕಮಾಲ್ ಮಾಡಿದೆ. ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷ 62ರಲ್ಲಿ ವಿಜಯ ಸಾಧಿಸಿದೆ. ಬಿಜೆಪಿ 8ರಲ್ಲಿ ಗೆಲುವು ದಾಖಲಿಸಿದೆ. ಕಾಂಗ್ರೆಸ್ ಮತ್ತೊಮ್ಮೆ ಶೂನ್ಯ ಸಂಪಾದನೆ ಮಾಡಿದೆ. ಆಪ್ ಕಾರ್ಯಕರ್ತರು ಭರ್ಜರಿಯಾಗಿ ಸಂಭ್ರಮಾಚರಣೆ ಮಾಡಿದ್ದಾರೆ.

ಭರ್ಜರಿ ಗೆಲುವಿನ ಖುಷಿಯಲ್ಲಿರುವ ಸಿಎಂ ಅರವಿಂದ ಕೇಜ್ರಿವಾಲ್ ಫೆಬ್ರವರಿ 14ಕ್ಕೆ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪೊರಕೆ ಸಂಕೇತದ ಆಪ್ ಪಾರ್ಟಿ ಮತ್ತೆ 5 ವರ್ಷಗಳ ಕಾಲ ಆಡಳಿತ ನಡೆಸಲಿದೆ. ಇನ್ನು ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಸುಭಾಷ ಚೋಪ್ರಾ ರಾಜೀನಾಮೆ ಸಲ್ಲಿಸಿದ್ದಾರೆ.

ಈ ವೇಳೆ ಮಾತ್ನಾಡಿರುವ ಸಿಎಂ ಅರವಿಂದ ಕೇಜ್ರಿವಾಲ್, ಇದು ದೆಹಲಿ ಜನರ ಪ್ರತಿ ಮನೆಯ ಗೆಲುವು. ಅಭಿವೃದ್ಧಿ ಕೆಲಸಕ್ಕೆ ಸಿಕ್ಕ ಗೆಲುವು ಅಂತಾ ಹೇಳಿದ್ದಾರೆ. ಅಲ್ದೇ ದೆಹಲಿ ಜನ ಹೊಸ ರಾಜಕೀಯಕ್ಕೆ ಜನ್ಮ ನೀಡಿದ್ದಾರೆ. ಮಂಗಳವಾರ ಹನುಮಂತನ ದಿನದಂದು ಸಿಕ್ಕ ಗೆಲುವು ಎಂದು ಅವರು ಹನುಮಂತನಿಗೆ ಜೈ ಅಂತಾ ಹೇಳಿದ್ರು. ಭಾರತ ಮಾತ್ ಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗುವ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟರು. ದೆಹಲಿ ಜನತೆಗೆ ಐ ಲವ್ ಯೂ ಅಂತಾ ಹೇಳುವ ಮೂಲಕ ಧನ್ಯವಾದಗಳನ್ನ ಸಲ್ಲಿಸಿದ್ರು.




Leave a Reply

Your email address will not be published. Required fields are marked *

error: Content is protected !!