ಜೇವರಗಿ ಬಳಿ ಅಪಘಾತ ತಂದೆ ಮಗ ಸಾವು

530

ಜೇವರಗಿ: ತಾಲೂಕಿನ ಸೊನ್ನ ಹಿಪ್ಪರಗಾ ಎಸ್ಎನ್ ಕ್ರಾಸ್ ಬಳಿ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್ ಸವಾರರಾದ ತಂದೆ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಲಬುರಗಿ ಜಿಲ್ಲೆ ಜೇವರಗಿ ತಾಲೂಕಿನ ರಂಜಣಗಿ ಗ್ರಾಮದ ನಿವಾಸಿಗಳಾದ 60 ವರ್ಷದ ಮಹ್ಮದ ಮುಲ್ಲಾ ಹಾಗೂ 24 ವರ್ಷದ ಮಿಟ್ಟೆಸಾಬ ಮುಲ್ಲಾ ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. ಜೇವರಗಿಯಿಂದ ಸ್ವಗ್ರಾಮವಾದ ರಂಜಣಗಿ ಕಡೆಗೆ ಬರುವ ಸಮಯದಲ್ಲಿ, ವಿಜಯಪುರದಿಂದ ಜೇವರಗಿ ಕಡೆಗೆ ಬರುತ್ತಿರುವ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಇದ್ರಿಂದಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ನೆಲೋಗಿ ಪಿಎಸ್ ಐ ಸಿದ್ಧರಾಯ ಬಳ್ಳೂರ್ಗಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!