ನಾನು ಇದೇ ದೇಶದವನು: ನಟ ಚೇತನ್ ಅಹಿಂಸಾ

163

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಹಾಗೂ ಸಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರ ಓಸಿಐ(ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ) ರದ್ದು ಮಾಡಲಾಗಿದೆ. ಈ ಕುರಿತು ನೋಟಿಸ್ ನೀಡಲಾಗಿದೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ಅವರು, ನಾನು ಕಳೆದ 18 ವರ್ಷಗಳಿಂದ ಭಾರತದಲ್ಲಿದ್ದೇನೆ. ನನ್ನ ತಂದೆ, ತಾಯಿ ಭಾರತದವರು. 23 ವರ್ಷ ನಾನು ಬೆಳೆದಿದ್ದು, ಓದಿದ್ದು ಅಮೆರಿಕಾದಲ್ಲಿ. ಆದರೆ, 2005ರಲ್ಲಿ ಭಾರತಕ್ಕೆ ಬಂದು ಇಲ್ಲಿಯೇ ಇದ್ದೇನೆ ಎಂದರು.

ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಎಲ್ಲವೂ ಇದೆ. ತೆರಿಗೆ ಕಟ್ಟುತ್ತೇನೆ. 2018ರಲ್ಲಿ ಓಸಿಐ ಕೊಟ್ಟರು. 2022ರಲ್ಲಿ ಶೋಕಾಸ್ ನೋಟಿಸ್ ಕೊಟ್ಟಿದ್ದರು. ನಾನು ಕೇಂದ್ರ ಗೃಹ ಸಚಿವಾಲಯಕ್ಕೆ ಹೋಗಿ ದಾಖಲೆ ಸಲ್ಲಿಸಿ ಬಂದೆ. ಈಗ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೇನೆ ಎಂದು ವೀಸಾ ರದ್ದು ನೋಟಿಸ್ ನೀಡಿದ್ದಾರೆ. ಇದು ಉದ್ದೇಶಪೂರ್ವಕವಾಗಿ ನನ್ನ ಮೇಲೆ ಪಿತೂರಿ.

ನನ್ನ ವಾಕ್ ಸ್ವಾತಂತ್ರ್ಯ ಕಿತ್ತು ಜೈಲಿಗೆ ಹಾಕುವುದಲ್ಲದೆ ನಾನು ಈ ದೇಶದಲ್ಲಿ ಇರಬಾರದು ಎಂದು ವೀಸಾ ರದ್ದು ಮಾಡುತ್ತಿದ್ದಾರೆ. ನಾನು ಕಾನೂನು ಮೂಲಕ ಹೋರಾಟ ಮಾಡುತ್ತೇನೆ. ಇದಕ್ಕೆ ಸ್ಟೇ ತರುತ್ತೇನೆ ಎಂದು ತಿಳಿಸಿದರು. ಒಂದು ಸಮುದಾಯದ ಲಾಬಿ ಎಂದಿದ್ದಕ್ಕೆ 295ಎ ಕೇಸ್ ಹಾಕಿದರು. ಧಾರ್ಮಿಕ ಭಾವನೆಗೆ ದಕ್ಕೆ ಮಾಡಲಾಗಿದೆ ಎಂದು ಮೂರು ದಿನ ಜೈಲಿಗೆ ಹಾಕಿದರು. ಈಗ ಓಸಿಐ ರದ್ದು ನೋಟಿಸ್ ನೀಡಲಾಗಿದೆ. ಚುನಾವಣೆಗೆ ನಿಲ್ಲುವುದು, ಮತ ಹಾಕುವುದು, ಸರ್ಕಾರಿ ನೌಕರನಾಗಿ ಕೆಲಸ ಮಾಡುವುದು ಬಿಟ್ಟು ಎಲ್ಲ ಹಕ್ಕುಗಳಿವೆ.

ಸಿನಿಮಾ, ರಂಗಭೂಮಿ, ಜಾನಪದ ಮೂಲಕ ಸಾಮಾಜಿಕ ಬದಲಾವಣೆ ತರುವ ಕೆಲಸ ಮಾಡಿದೆ. ನನ್ನ ಅಂಬೇಡ್ಕರ್, ಪೆರಿಯಾರ್ ಸಿದ್ಧಾಂತ ಸರ್ಕಾರಕ್ಕೆ ಇಷ್ಟವಾಗಿಲ್ಲ. ಒಂದು ವರ್ಷದ ಹಿಂದೆ ಗನ್ ಮ್ಯಾನ್ ಹಿಂದಕ್ಕೆ ಪಡೆದರು. ಆದಿವಾಸಿಗಳಿಗಾಗಿ 528 ಮನೆಗಳನ್ನು ಕಟ್ಟಿಸಿಕೊಟ್ಟ ಹಮ್ಮೆ ನನಗೆ ಇದೆ ಎಂದರು. ನಾನು ಇದೆ ದೇಶದವನು. ಅಮೆರಿಕಾಕ್ಕೆ ಹೋಗುವುದಿಲ್ಲ. ವಕೀಲರ ಜೊತೆ ಮಾತನಾಡಿ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.




Leave a Reply

Your email address will not be published. Required fields are marked *

error: Content is protected !!