Search

ನಂದಿನಿ ಗುಪ್ತಾಗೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ

135

ಪ್ರಜಾಸ್ತ್ರ ಲೈಫ್ ಸ್ಟೈಲ್

ಇಂಪಾಲ್: ರಾಜಸ್ಥಾನದ ನಂದಿನಿ ಗುಪ್ತಾ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2023 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ. ಮಣಿಪುರದ ಇಂಪಾಲ್ ನ ಖುಮಾನ್ ಲಂಪಾಕ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಂದಿನಿ ಗುಪ್ತಾ ಮುಂಚಿದ್ದಾಳೆ.

ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್, ಮಣಿಪುರದ ತನೊಜಮ್ ಸ್ಟ್ರೆಲಾ ಲುವಾಂಗ್ 2ನೇ ರನ್ನರ್ ಅಪ್ ಕಿರೀಟವನ್ನು ಮುಡಿಗೇರಿಸಿಕೊಂಡರು. 59ನೇ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಸ್ಪರ್ಧೆ ಯಶಸ್ವಿಯಾಗಿ ನಡೆದಿದೆ. 2022ರ ವಿನ್ನರ್, ಕರ್ನಾಟಕದ ಸಿನಿ ಶೆಟ್ಟಿ ನಂದಿನಿ ಗುಪ್ತಾಗೆ ಕಿರೀಟ ಮುಡಿಸಿದರು.

2024ರಲ್ಲಿ ನಡೆಯುವ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ನಂದಿನಿ ಗುಪ್ತಾ ಭಾಗವಹಿಸಲಿದ್ದಾರೆ. 30 ರಾಜ್ಯಗಳ ಸುಂದರಿಯರು ಇದರಲ್ಲಿ ಭಾಗವಹಿಸಿದ್ದರು. 2022ರ ಮೊದಲ ರನ್ನರ್ ಅಪ್ ರಾಜಸ್ಥಾನದ ರೊಬಲ್ ಶೇಖಾವತ್, 2023ರ ಮೊದಲ ರನ್ನರ್ ಅಪ್ ಶ್ರೇಯಾಗೆ, 2ನೇ ಮಾಜಿ ರನ್ನರ್ ಅಪ್ ಉತ್ತರ ಪ್ರದೇಶದ ಶಿನಾತಾ ತೌನೋಜಮ್ ಗೆ ಕಿರೀಟ ತೊಡಿಸಿದರು.




Leave a Reply

Your email address will not be published. Required fields are marked *

error: Content is protected !!